ಆರೋಗ್ಯವೇ ಭಾಗ್ಯ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆ ಇಲ್ಲ. ಆರೋಗ್ಯವೇ ಪ್ರತಿ ಸಂಪತ್ತಿನ ಯಜಮಾನ.

ಆರೋಗ್ಯ ಎಂಬ ಯಜಮಾನನು ಕ್ಷೀಣಿಸಿದರೆ ಎಲ್ಲ ಸಂಪತ್ತು ಕ್ಷೀಣಿಸಿದಂತೆ. ಮೊದಲು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡರೆ 100 ವರ್ಷದವರೆಗೆ ಸಾಹಿತ್ಯ ಸಂಪತ್ತು, ಧನ, ಧಾನ್ಯ, ಚಿರಾಸ್ತಿ ಮುಂತಾದವುಗಳನ್ನು ಒಂದೊಂದಾಗಿ ವೃದ್ಧಿಸಿಕೊಳ್ಳಬಹುದು.
ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು. (40 ವರ್ಷದ ನಂತರ ಪ್ರತಿಯೊಬ್ಬರೂ)

* ಆಹಾರ
* ಯೋಗ
* ವ್ಯಾಯಾಮ
* ವಾಯು ವಿಹಾರ
* ಸಂಗೀತ ಮುಂತಾದವುಗಳನ್ನು ಕಟ್ಟುನಿಟ್ಟಾಗಿ ಸಮಯಾನುಸಾರ ಅನು ಸರಿಸಬೇಕಾತ್ತದೆ.

(1) ಆಹಾರ:

ಸಾತ್ವಿಕ ಆಹಾರವು ವ್ಯಕ್ತಿಯ ವಯಸ್ಸಿಗೆ ಮತ್ತು ಸಮಯಕ್ಕೆ ಅನುಸಾರ ತೆಗೆದು ಕೊಳ್ಳುವ ಕ್ರಮ (1) ಮುಂಜಾನೆ ಸಮಯದಲ್ಲಿ ಎಣ್ಣೆ ಪದಾರ್ಥದಿಂದ ದೂರ ಇರುವ ಆಹಾರ ಸೇವಿಸಿ. ಉದಾ: ಚಪಾತಿ, ಮೊಳಕೆ ಬರಿಸಿದ ಕಾಳಿನ ಪಲ್ಯ, ಇಡ್ಲಿ ಸಾಂಬಾರ, ತರಕಾರಿ ಸಹಾಯ ದಿಂದ ತಯಾರಿಸಿದ ದೋಸೆ ತಿಂದರೆ ಉತ್ತಮ. ಮಧ್ಯಾಹ್ನ ಲಘುವಾದ ಪಾನೀಯ ಗಳು ಉದಾ; ಹುರುಳಿ ಕಾಳಿನ, ನಿಂಬೆಹಣ್ಣಿನ ಪಾನಕಗಳನ್ನು, ಗಜ್ಜರಿ, ಸೌತೇಕಾಯಿ ಸೇವಿಸಿ. ಎಳನೀರು ಸಾಯಂ ಕಾಲ (ಎಂದರೆ 5-30ರಿಂದ 7-30) ಮನೆಯಲ್ಲಿರುವ ಹಸಿ ನೆಲಗಡಲೆ ಬೆಲ್ಲ, ಖರ್ಜೂರ, ಬಾದಾಮ್, ಗೋಡಂಬಿ (ಯಾವುದಾದರೂ ಒಂದನ್ನು ಒಂದು ದಿನಕ್ಕೆ) ತಿಂದು ಬೇಕಾದರೆ ಚಹಾ ಕುಡಿಯಬಹುದು. ರಾತ್ರಿ ಬೇಗನೆ (8.30-9.30) ಊಟ ಮಾಡಿ. ಊಟಕ್ಕೆ-ಜೋಳದ ರೊಟ್ಟಿ, ರಾಗಿ ರೊಟ್ಟಿ, ಚಪಾತಿ (ದಿನ ಬೇರೆ ಬೇರೆ) ಮುಂತಾದ ಗಟ್ಟಿ ಪದಾರ್ಥವನ್ನು ಇಷ್ಟವಾದ ತರಕಾರಿ ಜೊತೆ ಸೇವಿಸಿ. ಊಟದ ನಂತರ ಕಡ್ಡಾಯವಾಗಿ 100 ಅಡಿ ಹೆಜ್ಜೆ ಹಾಕಿ. 1/2 ಕಪ್ ಹಾಲು ಕುಡಿದು ಸುಖ ನಿದ್ರೆ ಮಾಡಿ.
ಊಟದಲ್ಲಿ ಎಣ್ಣಿ, ಖಾರ, ಉಪ್ಪು ಮಸಾಲೆ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಿ, ಇದರಿಂದ ಬಹು ದಿನಗಳವರೆಗೆ ದೇಹದ ಯಥಾಸ್ಥಿತಿ ಯೊಂದಿಗೆ ಕೂದಲು ಉದುರದು, ಸ್ನಾಯು ಸೆಳೆತ ಕಾಡದು.

(2) ಯೋಗ:

“ಚಿರಕಾಲ ಬಾಳಲು ಯೋಗ ಅನು ಸರಿಸಿ” ಎಂದು ಮಹಾತ್ಮರು ಹೇಳಿರು ವಂತೆ “ಯೋಗದಿಂದ ರೋಗ ದೂರ ವೆಂದು” ಚರಕ (ಆಯುರ್ವೇದ) ಮಹರ್ಷಿ ಹೇಳಿರುತ್ತಾರೆ.
ಯೋಗಗಳನ್ನು ವಾಯುವಿಹಾರದ ನಂತರ ನಿಧಾನವಾಗಿ ಕನಿಷ್ಠ 40 ನಿಮಿಷ ಪ್ರತಿನಿತ್ಯ ಯೋಗ ಮಾಡುವದನ್ನು ರೂಢಿಸಿಕೊಳ್ಳಬೇಕು. ಇದನ್ನು ಮಾಡುವವರಿಗೆ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳವುದರೊಂದಿಗೆ ಕೆಲಸದಿಂದ ವಿಶ್ರಾಂತಿ ದೊರೆಯುವುದು. ಮನಸ್ಸು ಹಗುರವಾಗಿ ಮುಂದಿನ ಕಾರ್ಯಯೋಜನೆಯನ್ನು ರೂಪಿಸುವುದರಿಂದ ಮುಂದಾಲೋಚನೆ ಯೊಂದಿಗೆ ಪ್ರತಿ ಕಾರ್ಯವು ಯಶಸ್ಸಾಗುವುದು.

(3) ವಾಯುವಿಹಾರ:

ದಿನನಿತ್ಯ 1/2 ಕಿ.ಮಿ. ನಡೆಯುವುದು ಅವಶ್ಯ. ನಡೆಯುವಾಗ ಮಾತನಾಡದೆ ವೇಗವಾಗಿ ನಡೆಯುತ್ತಿರಬೇಕು. ಸ್ನಾಯುಗಳು ಗಟ್ಟಿಯಾಗುತ್ತವೆ. ಮನಸ್ಸು ಹಗುರವಾಗಿರುತ್ತದೆ. ಉತ್ತಮ ಆಮ್ಲಜನಕ ದೊರೆತು ಶ್ವಾಸಕೋಸದ ತೊಂದರೆ ಕಾಣಿಸದು.

(4) ವ್ಯಾಯಾಮ:

ಬೆಳಗಿನ ಸೂರ್ಯೋದಯಕ್ಕೆ ಮುಂಚಿತವಾಗಿ ವ್ಯಾಯಾಮ ಮಾಡಲು ವಿಶಾಲವಾದ ಸ್ಠಳ ಆಯ್ದುಕೊಳ್ಳಿ.
* ನೇರವಾಗಿ ನಿಂತು ಕೈಗಳನ್ನು ಸುತ್ತಲೂ ಬೀಸುತ್ತಿರಿ. (ನಡುವನ್ನು ಪೂರ್ಣವಾಗಿ ತಿರುಗಿಸುತ್ತಿರಬೇಕು).
* ಕೈಗಳನ್ನು ಪೂರ್ಣವಾಗಿ ಮೇಲೆ ಎತ್ತಿ ನಿಧಾನವಾಗಿ ಬಾಗುತ್ತ ಕಾಲಿನ ಹೆಬ್ಬೆಟ್ಟನ್ನು ಮುಟ್ಟುವುದು. (ಹೀಗೆ 10ರಿಂದ 15 ಸಲ ಮಾಡಿ).
* ಒಂದು ಕಾಲನ್ನು 1 ಅಡಿ ಮುಂದೆ ಚಾಚಿ ಎರಡು ಕೈಗಳನ್ನು ಮುಂದೆ ಚಾಚಿರಿ. (ಸುಮಾರು 5 ನಿಮಿಷ).
* ಕಣ್ಣುಗಳನ್ನು ಸುತ್ತಲೂ ತಿರುಗಿಸುವುದು, ಮೇಲೆ ಕೆಳಗೆ ದೃಷ್ಟಿಯನ್ನು ಬೀರುವುದು ರೆಪ್ಪೆಗಳನ್ನು 10 ಸಲ ಪಿಳಿಕಿಸುವುದು ಕಣ್ಣುಗಳನ್ನು ಮುಚ್ಚಿ ಮತ್ತೆ ನಿಧಾನವಾಗಿ ತೆರೆಯುವುದು ಹೀಗೆ ಮಾಡುವುದರಿಂದ ಕಣ್ಣಿನ ತೊಂದರೆ ದೂರವಾಗುತ್ತದೆ.

(5) ಸಂಗೀತ:

ಇಂದಿನ ಒತ್ತಡದ ದಿನಗಳಲ್ಲಿ ಎಲ್ಲರೂ ಮನೆಯಿಂದ ಹೊರಗೆ ದುಡಿಯುತ್ತಿದ್ದು ಮಹಿಳೆಯರಿಗೆ ಮನೆ, ಮಕ್ಕಳು, ಪತಿರಾಯ, ಪರಿಸರ ಎಲ್ಲವೂಗಳ ಮಧ್ಯ ಸಿಲುಕಿ ತನ್ನ ವೈಯಕ್ತಿಕ ಬದುಕನ್ನು ತ್ಯಜಿಸುವಂತಾಗಿದೆ. ಈ ಎಲ್ಲ ಜವಾಬ್ದಾರಿಗಳನ್ನು ನಿವಾರಿಸಲು ಸಮಯ ಹೊಂದಾಣಿಕೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲು ಅವಳ ಮಾನಸಿಕ ಸ್ಥಿತಿಯು ಸದೃಢವಾಗಿರಲು ಸ್ವಲ್ಪಸಮಯವನ್ನು ಸಂಗೀತ ಆಲಿಸಲು ಮತ್ತು ಸ್ವರಚಿತ ಭಕ್ತಿಗೀತೆಗಳನ್ನು ಹಾಡಲು ಸಮಯವನ್ನು ನೀಡುವುದು ಅವಶ್ಯವಾಗಿದೆ. ದಿನನಿತ್ಯದ ಕಾರ್ಯಗಳನ್ನು ಹಗುರವಾಗಿ ಮಾಡಲು ಹಾಡುಗಳನ್ನು ಹಾಡುತ್ತ ಮಾಡುವುದರಿಂದ ಬೇಸರವಾಗದು. ವಯಸ್ಸು ಆಗುತ್ತಿದ್ದಂತೆ ಮಹಿಳೆಯು ಕ್ಷೀಣಿಸುತ್ತಿರುವ ದೇಹ ಎಂದು ಭಾವಿಸದೆ ಚೈತನ್ಯದ ಚಿಲುಮೆಯಂತಾಗಲು ಮೇಲಿನ ಕ್ರಮಗಳನ್ನು ಅನುಸರಿಸುತ್ತಿರಿ.

ಶಾಹ್‍ಜಾದಾಬಿ ಉಪನಾಳ

Leave a Reply