ಭಾರತ ಮತ್ತು ಅಮೇರಿಕ ನಡುವೆ ಸೇನಾ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ. ಎರಡೂ ದೇಶಗಳ ನಡುವೆ ನಡೆದ ಪ್ರಥಮ 2 ಪ್ಲಸ್ 2 ಎಂಬ ಚರ್ಚೆಯ ಬಳಿಕ ನಡೆದ ಸೇನಾ ಕರಾರಿಗೆ ಎರಡೂ ದೇಶಗಳು ಸಹಿ ಹಾಕಿದವು.

ಕಮ್ಯೂನಿಕೇಶನ್ ಕಾಂಪಾಟ್ಬಿಲಿಟಿ ಆಂಡ್ ಸೆಕ್ಯೂರಿಟಿ ಆಗ್ರಿಮೆಂಟ್ ಅಥವಾ ಕೊಂಕಾಸ್ ಒಪ್ಪಂದದ ಪ್ರಕಾರ ಅತ್ಯಾಧುನಿಕ ಅಮೇರಿಕನ್ ಸೈನಿಕೋಪಕರಣಗಳು ಭಾರತಕ್ಕೆ ದೊರೆಯಲಿದೆ. ಈ ಚರ್ಚೆಯಲ್ಲಿ ಇಂಡೋ ಫೆಸಿಫಿಕ್ ವಲಯದ ಸಹಕಾರಕ್ಕೆ ಸಂಬಂಧಿಸಿದ ವಿಚಾರಗಳು ಪ್ರಸ್ತಾಪವಾದವು.

ಪಾಕಿಸ್ತಾನ ಕೇಂದ್ರೀಕರಿಸಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ಕುರಿತೂ ಚಚೆಯಲ್ಲಿ ಪ್ರಸ್ತಾಪವಾಯಿತು.

Leave a Reply