ಪಶ್ಚಿಮ ಬಂಗಾಳ : ಬಂಗಾಳಿ ನಟಿ ಪಾಯಲ್ ಚಕ್ರವರ್ತಿ ಹೋಟೇಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗೂರ್ ನ ಹೋಟೆಲೊಂದರಲ್ಲಿ ಮಂಗಳವಾರ ಕೋಣೆ ಪಡೆದಿದ್ದರು. ನಿನ್ನೆ ಗಾಂಗ್ ಟೋಕ್ ಗೆ ಹೊಗುವುದಾಗಿ ಹೇಳಿದ್ದರು.
ಪಾಯಲ್ ರವರು ಹೊರಗೆ ಕಂಡು ಬಾರದಿರುವ ಕಾರಣ ಹೋಟೇಲ್ ವ್ಯವಸ್ಥಾಪಕರು ಬಾಗಿಲು ಬಡಿದು ಹಲವು ಬಾರಿ ಕರೆದರೂ ಉತ್ತರ ಬಾರದ ಕಾರಣ ಬಾಗಿಲು ಒಡೆದು ಒಳ ಪ್ರವೇಶಿಸ ಬೇಕಾಯಿತು. ಪಾಯಲ್ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಆತ್ಮಹತ್ಯೆಯಾಗಿರಬಹುದೆಂಬ ಶಂಕೆಯಿದೆ. ಅನೇಕ ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಈಕೆ ಇತ್ತೀಚೆಗೆ ಸಿನಿಮಾದಲ್ಲೂ ಅಭಿನಯಿಸಿದ್ದರು. ವಿವಾಹ ವಿಚ್ಚೇಧಿತೆಯಾದ ಇವರಿಗೆ ಓರ್ವ ಪುತ್ರನಿದ್ದಾನೆ.