ಹೊಸದಿಲ್ಲಿ: ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಿದ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಮತ್ತು ಪೊಲೀಸರು ನಿಯಮ ಪಾಲಿಸಿಲ್ಲ ಎಂದು ಮಾನವ ಹಕ್ಕು ಆಯೋಗ ನೋಟಿಸು ಜಾರಿಗೊಳಿಸಿದೆ.

ಬಂಧನಕ್ಕೆ ಸಂಬಂಧಿಸಿ ಪೊಲೀಸರು ಸ್ವೀಕರಿಸಿದ ಕ್ರಮಗಳು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಆದ್ದರಿಂದ ನಾಲ್ಕು ವಾರಗಳಲ್ಲಿ ಮಹಾರಾಷ್ಟ್ರ ಡಿಜಿಪಿ ಮತ್ತು ಮಹಾರಾಷ್ಟ್ರ ಸರಕಾರದ ಮುಖ್ಯ ಕಾರ್ಯದರ್ಶಿ ತನಗೆ ವರದಿಯನ್ನು ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

ಮಾಧ್ಯಮ ವರದಿಗಳ ಆಧಾರದಲ್ಲಿ ಆಯೋಗ ಸ್ವಪ್ರೇರಣೆಯಿಂದ ಕೇಸು ಹಾಕಿದೆ. ಗೌತಂನಖ್ವರ ಟ್ರಾನ್ಸಿಟ್ ರಿಮಾಂಡ್ ದಿಲ್ಲಿ ಹೈಕೋರ್ಟು ತಡೆಯಾಜ್ಞೆ ವಿಧಿಸಿತ್ತು ಎಂದು ಆಯೋಗ ಬೆಟ್ಟು ಮಾಡಿ ತೋರಿಸಿದೆ. ಪೊಲೀಸರಿಗೆ ಬಂಧಿತರ ಮೇಲಿರುವ ಆರೋಪ ಏನೆಂದು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗಿಲ್ಲ ಎಂದು ಆಯೋಗ ಹೇಳಿದೆ.

ಸ್ಥಳೀಯ ಸಾಕ್ಷಿ ಇಲ್ಲದೆ ಗೌತಂನಖ್ವರ ಟ್ರಾನ್ಸಿಟ್ ರಿಮಾಂಡ್ ದಿಲ್ಲಿ ಕೋರ್ಟಿನಿಂದ ಪುಣೆ ಪೊಲೀಸರು ಪಡೆದು ಕೊಂಡರು ಎಂದು ಹೇಳಲಾಗುತ್ತಿದೆ. ಪೊಲೀಸ್ ದಾಖಲೆಯ ಇಂಗ್ಲಿಷ್ ಅನುವಾದವನ್ನು ತನಗೆ ಕೊಡಬೇಕೆಂದು ಕೋರ್ಟು ಹೇಳಿದೆ. ಸುಧಾ ಭಾರದ್ವಾಜರ ಟ್ರಾನ್ಸಿಟ್ ರಿಮಾಂಡ್ ಫರೀದಾಬಾದ್ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟರ ತೀರ್ಮಾನಕ್ಕೆ ವಿಧೇಯವಾಗಿದ್ದು, ಎಫ್‍ಐಆರ್‍ನಲ್ಲಿ ಹೆಸರು ಕೂಡಾ ಇಲ್ಲ ಎಂದು ಸುಧಾ ಭಾರದ್ವಾಜ್ ತಿಳಿಸಿದರು.

ರೋನ್ ವಿಲ್ಸನ್ ಸಹಿತ ಐವರು ಮಾನವಹಕ್ಕು ಕಾರ್ಯಕರ್ತರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಜಿನೇವದ ಒಂದು ಸ್ವಯಂಸೇವಾ ಸಂಘಟನೆ ಆಯೋಗಕ್ಕೆ ದೂರು ಕಳುಹಿಸಿದೆ ಎಂದು ಆಯೋಗ ತಿಳಿಸಿದೆ. ಜೂನ್‍ನಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಕಳುಹಿಸಿದ ನೋಟಿಸಿಗೆ ಇದುವರೆಗೆ ಉತ್ತರ ಸಿಕ್ಕಿಲ್ಲ ಎಂದು ಆಯೋಗ ಹೇಳಿದೆ.

Leave a Reply