Disabled blind goes with cane on sunset

ಸಹನಾಳಿಗೆ ಚರ್ಮದಲ್ಲಿ ಆದ ಬದಲಾವಣೆ ನೋಡಿ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅದಕ್ಕಿಂತಲೂ ದೊಡ್ಡ ಆಘಾತ ಗಂಡ ತನ್ನ ಎರಡೂ ಕಣ್ಣುಗಳ ಪ್ರಕಾಶ ಕಳಕೊಂಡು ಶಾಶ್ವತವಾಗಿ ಕತ್ತಲ ಲೋಕಕ್ಕೆ ಹೋಗಿದ್ದನು.

ಒಂದರ್ಥದಲ್ಲಿ ವಿಧಿಯೇ ಅವರಿಗೆ ಈ ರೀತಿಯ ಸನ್ನಿವೇಶ ನೀಡಿತ್ತೋ ಏನೋ?

ಅಂತೂ ಅವರಿಬ್ಬರ ಪ್ರೀತಿಗೆ ಯಾವುದೇ ಗಂಡಾಂತರಗಳು ಅಡ್ಡಿ ಆಗಲಿಲ್ಲ.

ಪತ್ನಿಯ ಚರ್ಮರೋಗ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿತ್ತು. ಆಕೆಯ ರೂಪ ಕುರೂಪಕ್ಕೆ ತಿರುಗಿತ್ತು. ಜನರು ನೋಡಲು ಅಸಹ್ಯ ಪಡುವಷ್ಟು, ಆದರೆ ಆಕೆಯ ಗಂಡನಿಗೆ ಇದ್ಯಾವುದೂ ಕಾಣುತ್ತಿಲ್ಲ. ಆದ್ದರಿಂದ ಆಕೆಯ ದೇಹದಲ್ಲಿ ಆದ ಬದಲಾವಣೆಯಿಂದ ಆತನಲ್ಲಿ ಯಾವುದೇ ಪರಿಣಾಮ ಇಲ್ಲ.

“ಬಹುಶಃ ಆಕೆಗೆ ಬಂದ ರೋಗದ ಕಾರಣದಿಂದ ಆತನ ಕಣ್ಣನ್ನು ದೇವನು ಕಿತ್ತುಕೊಂಡಿರಬೇಕು. ಒಳ್ಳೆಯದೇ ಆಯ್ತು” ಎಂದು ಜನರಾಡಿಕೊಳ್ಳ ತೊಡಗಿದರು.

ಜನರೇನೇ ಅನ್ನಲಿ, ಜನರ ಬಾಯಿ ಮುಚ್ಚಲು ಸಾಧ್ಯವಿಲ್ಲ. ಈ ಪತಿ ಪತ್ನಿ ತಮ್ಮದೇ ಪ್ರೀತಿಯ ಲೋಕದಲ್ಲಿ ಸಂತೋಷದಿಂದ ಇದ್ದರು.

“ರೀ, ನನ್ನ ರೋಗ ಉಲ್ಬಣಗೊಂಡು, ನಾನು ನಿಮ್ಮನ್ನು ಬಿಟ್ಟು ಹೋದರೆ, ನಿಮ್ಮನ್ನು ಯಾರು ನೋಡಿಕೊಳ್ಳುವರು” ಎಂಬುದೇ ನನ್ನ ಚಿಂತೆ ಎಂದು ಆಕೆ ಆಗಾಗ ಹೇಳುತ್ತಿದ್ದಳು.

ಇಲ್ಲ ಕಣೇ, ನನಗಿಂತ ಮುಂಚೆ ನಾನೇ ಹೋಗಿ ಬಿಟ್ಟರೆ, ಯಾರಿಗೆ ಗೊತ್ತು, ವಿಧಿಯ ಲೀಲೆ ಏನು ಎಂದು ಆತ ಮರುತ್ತರ ನೀಡಿದಾಗ ಆಕೆ ಆತನ ಬಾಯಿಗೆ ಕೈ ಇಟ್ಟಿದ್ದಳು.

ಆಕೆಯ ಚರ್ಮರೋಗ ದಿನದಿಂದ ದಿನಕ್ಕೆ ಉಲ್ಬಣಗೊಂಡು, ಆಸ್ಪತ್ರೆಯ ಬೆಡ್ ನಲ್ಲಿ ಆಕೆ ಕೊನೆಯುಸಿರೆಳೆದಳು.

ಆತನ ದುಃಖಕ್ಕೆ ಪಾರವೇ ಇರಲಿಲ್ಲ. ಜೊತೆಜೊತೆಯಾಗಿ ಬಾಳಿದವರು ಅನಿರೀಕ್ಷಿತವಾಗಿ ನಮ್ಮನ್ನು ಬಿಟ್ಟು ಹೋದಾಗ ಅದರ ನೋವು ಅನುಭವಿಸಿದವರಿಗೇ ಗೊತ್ತು.

ಆತ ಪತ್ನಿ ಇಲ್ಲದ ಮನೆಯಲ್ಲಿ ನಾನಿನ್ನು ಇರಲಾರೆ ಎಂದು ತನ್ನ ಗಂಟು ಮೂಟೆ ಕಟ್ಟಿ ಯಾತ್ರೆಗೆ ಹೊರಟ.

ಪಕ್ಕದ ಮನೆಯವರು ಬಂದು ಸಾಂತ್ವನ ಹೇಳಿದರು.

ನೀನು ಎಲ್ಲಿಗೆ ಹೋಗ್ತಿಯಾ? ಕಣ್ಣು ಬೇರೆ ಕಾಣಲ್ಲ ನಿನಗೆ..ಆತುರದ ತೀರ್ಮಾನ ಬೇಡ ಎಂದು ಹೇಳಿದರು.

“ಆತ ತನ್ನ ಕಪ್ಪು ಕನ್ನಡಕವನ್ನು ತೆಗೆದ….ನನ್ನ ಕಣ್ಣಿಗೇನು ಸಂಭವಿಸಿದೆ. ನನ್ನ ಕಣ್ಣಿಗೇನೂ ಆಗಿಲ್ಲ. ನನ್ನ ಪತ್ನಿಯ ಸಮಾಧಾನಕ್ಕೋಸ್ಕರ ಕಣ್ಣಿದ್ದೂ ಕುರುಡನಂತೆ ನಟಿಸಬೇಕಾಯಿತು. ಆಕೆಯ ವಿರೂಪ ನಾನು ಕಂಡಿಲ್ಲ ಎಂಬ ನೆಮ್ಮದಿ ಆಕೆಯ ಮುಖದಲ್ಲಿ ನನಗೆ ಕಾಣುತ್ತಿತ್ತು” ಎನ್ನುತ್ತಾ ಆತ ಹೊರ ನಡೆದ.

Leave a Reply