ದೇಶ ಸೇವೆ ಮಾಡಲು ನಮ್ಮ ಯೋಧರು ಯಾವ ತ್ಯಾಗಕ್ಕೂ ಸದಾ ಸಿದ್ಧರಾಗಿರುತ್ತಾರೆ. ಗಡಿಯನ್ನು ಕಾಯುತ್ತಾ ಕೊರೆಯುವ ಚಳಿಯಲ್ಲೂ ದೇಶಕ್ಕಾಗಿ ಸದಾ ಸನ್ನದ್ಧರಾಗಿರುತ್ತಾರೆ.
ವಿಶ್ವದ ಅತ್ಯಂತ ಎತ್ತರದ ಭೂಮಿ ಸಿಯಾಚಿನ್’ನಲ್ಲಿ ಭಾರತೀಯ ಸೇನೆಯ ಯೋಧರ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಸದ್ದು ಮಾಡಿದ್ದು,
ಸಾಕಷ್ಟು ಮಂದಿ ಅದರಿಂದ ಪ್ರಭಾವಿತರಾಗಿದ್ದಾರೆ.
ಸಿಯಾಚಿನ್ ಯೋಧರ ಜ್ಯೂಸ್ ಮತ್ತು ಮತ್ತಿತರ ಆಹಾರಗಳು ಮಂಜುಗಡ್ಡೆ ಮತ್ತು ಕೊರೆಯುವ ಚಳಿಗೆ ಸಂಪೂರ್ಣ ಕಲ್ಲಾಗಿರುವುದನ್ನು ಯೋಧರು ತೋರಿಸುತ್ತಿದ್ದಾರೆ.
ಆ ವಿಡಿಯೋವನ್ನು ಅವರು ನಗು ಮುಖದೊಂದಿಗೆ ಒಡೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಯೋಧರು ಸಿಯಾಚಿನ್‍ನಲ್ಲಿ ತಮ್ಮ ಬದುಕು ಸಾಗಿಸುತ್ತಿದ್ದಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.. ವಿಡಿಯೋ ನೋಡಿ

Leave a Reply