ಕೌನ್ ಬನೇಗಾ ಕರೋಡಪತಿ 11ರ ಅಂತಿಮ ಎಪಿಸೋಡ್ ನಂಬರ್ 29ರಂದು ಶುಕ್ರವಾರ ಪ್ರಸಾರವಾಗಲಿದೆ. ವಿಶೇಷವೆಂದರೆ ಈ ಬಾರಿ “ಕರಂವೀರ್ ಸ್ಪೆಷಲ್ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಅಧ್ಯಕ್ಷೆ ಮತ್ತು ಲೇಖಕಿ ಸುಧಾಮೂರ್ತಿ ಹಾಟ್ ಸೀಟ್ ನಲ್ಲಿ ಭಾಗವಹಿಸಲಿದ್ದಾರೆ. ಎಪಿಸೋಡ್ ನ ಟೀಸರನ್ನು ನಟಿಯರನ್ನು ಈಗಾಗಲೇ ಚಾನೆಲ್ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ಅಮಿತಾಬಚ್ಚನ್ ರವರು ಶ್ರೀಮತಿ ಮೂರ್ತಿಯವರನ್ನು ಸ್ವಾಗತಿಸಿದ ಬಳಿಕ ಅವರನ್ನು ಶ್ಲಾಘಿಸುತ್ತಾರೆ. ಇದೇ ಸಂದರ್ಭದಲ್ಲಿ ಸುಧಾಮೂರ್ತಿ ಅವರು ತಮ್ಮ ಗತಕಾಲದ ಘಟನೆಗಳನ್ನು ಮೆಲುಕು ಹಾಕುತ್ತಾರೆ. ನಾನು ಕರ್ನಾಟಕದ ಹುಬ್ಬಳ್ಳಿಯ ಕಾಲೇಜಿನ ಮೊದಲ ಮಹಿಳಾ ಎಂಜಿನಿಯರ್ ಎಂದು ಹೇಳಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ.

1968 ರಲ್ಲಿ ನಾನು ಎಂಜಿನಿಯರ್ ಆಗಲು ನಿರ್ಧರಿಸಿದೆ. ನಮ್ಮ ಕುಟುಂಬದ ಹಲವಾರು ಸದಸ್ಯರು ನನ್ನ ನಿರ್ಧಾರವನ್ನು ಬೆಂಬಲಿಸಲಿಲ್ಲ. ಏಕೆಂದರೆ ಎಂಜಿನಿಯರ್ ವ್ಯಾಸಂಗ ಮಾಡಿದರೆ ನಮ್ಮ ಸಮುದಾಯದಲ್ಲಿ ಯಾರು ನನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದರು. ಆದರೂ ನಾನು ನನ್ನ ನಿರ್ಧಾರದಲ್ಲಿ ಅಚಲವಾಗಿದ್ದೆ. ಆ ಕಾಲದಲ್ಲಿ ಕಾಲೇಜಿನಲ್ಲಿ 599 ಹುಡುಗರು ಕಲಿಯುತ್ತಿದ್ದು, ಕಾಲೇಜಿನಲ್ಲಿ ನಾನೊಬ್ಬಳೆ ಹುಡುಗಿ.

ನನ್ನ ಮಾರ್ಕ್ ನೋಡಿ ನನಗೆ ಎಡ್ಮಿಶನ್ ನೀಡಿದರು. ಆದರೆ ಮೂರು ಕಂಡೀಷನ್ ಹಾಕಿದರು. ಸಾರಿ ತೊಡಬೇಕು. ಎ ಕ್ಯಾಂಟೀನಿಗೆ ಹೋಗಬಾರದು. ಹುಡುಗರ ಜೊತೆ ಮಾತನಾಡಬಾರದು. ನಾನು ಒಪ್ಪಿಕೊಂಡೆ. ಆದರೆ ನಾನು ಪ್ರಥಮ ರಾಂಕ್ ಬಂದಾಗ ಎಲ್ಲರೂ ನನ್ನ ಹತ್ತಿರ ಬಂದು ಮಾತನಾಡಲು ತೊಡಗಿದರು ಎಂದು ಹೇಳಿದರು. ಆ ಕಾಲದಲ್ಲಿ ನನಗೆ ಶೌಚಾಲಯದ ಮಹತ್ವ ಅರಿವಿಗೆ ಬಂತು. ಶೌಚಾಲಯ ಇಲ್ಲದ ಕಷ್ಟ ಅನುಭವಿಸಿದ್ದರಿಂದ ನಮ್ಮ ಇನ್ಫೋಸಿಸ್ ಫೌಂಡೇಶನ್ ನಿಂದ 1600 ಶೌಚಾಲಯ ನಾವು ನಿರ್ಮಿಸಿದ್ದೇವೆ ಎಂದು ಹೇಳಿದರು. ಹಮ್ ಇಸ್ ದೇಶ್ ಕಿ ವಾಸಿ ಹೈ ಜಿಸ್ ದೇಶ್ ಮೇ ಸುಧಾ ಮೂರ್ತಿ ರೆಹ್ತೆ ಹೈ , ನಾವು ಕೂಡ ಸುಧಾ ಮೂರ್ತಿ ಇರುವ ದೇಶವಾಸಿ ಎನ್ನಲು ಹೆಮ್ಮೆಯಾಗುತ್ತದೆ ಎಂದು ಅಮಿತಾಭ್ ಭಾವುಕರಾಗಿ ಹೇಳಿದರು.  ವಿಡಿಯೋ ನೋಡಿ..

https://www.youtube.com/watch?v=Niw3GtI4mEo

http://https://www.instagram.com/tv/B5ShWE0lsEE/?utm_source=ig_embed&utm_campaign=loading

Leave a Reply