ನವದೆಹಲಿ: ಭಾರತದ ಏಕತೆ ಮತ್ತು ಭಾರತೀಯರ ಘನತೆಯನ್ನು ನಮ್ಮ ಸಂವಿಧಾನ ಎತ್ತಿಹಿಡಿಯುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಸಂವಿಧಾನ ದಿನಾಚರಣೆ ಅಂಗವಾಗಿ ಸಂಸತ್ನ ಸೆಂಟರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದು, ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಂಬೇಡ್ಕರ್ ಅವರಿಗೆ ಈ ಸಂದರ್ಭದಲ್ಲಿ ನಮನ ಸಲ್ಲಿಸಿದರು.

ಸಂವಿಧಾನವನ್ನು ಅಳವಡಿಸಿಕೊಂಡ ನಂತರ ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ಶಕ್ತವಾಗಿದೆ. ಇಂದೇನಾದರೂ ಬಾಬಾಸಾಹೇಬ್ ಅಂಬೇಡ್ಕರ್ ಇರುತ್ತಿದ್ದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿ ಆಗುತ್ತಿದ್ದರು ಎಂದರು.

ಮಾತ್ರವಲ್ಲ ಪ್ರಜಾಪ್ರಭುತ್ವದಲ್ಲಿನ ಜನರ ವಿಶ್ವಾಸವನ್ನು ಹೊಗಳಿದ ಪ್ರಧಾನಿ, ಸಂವಿಧಾನ ಒಂದು ಪವಿತ್ರ ಗ್ರಂಥವಾಗಿದೆ. ಭಾರತದ 130 ಕೋಟಿ ಜನ ಎಂದಿಗೂ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ ಮತ್ತು ಸಂವಿಧಾನ ಪ್ರಜೆಗಳಿಗೆ ಮಾರ್ಗದರ್ಶಿ ಗ್ರಂಥವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

Leave a Reply