ಮಗುವನ್ನು ನೂರು ಬಾರಿ ರೇಪ್ ಮಾಡಿದ ಕ್ರೂರಿ ಪಾಪಿಗೆ 120 ವರ್ಷ ಜೈಲು ಶಿಕ್ಷೆಯಾಗಿದೆ. ಅಮೇರಿಕಾದ ಅಯೋವಾದಲ್ಲಿ ಈ ಘಟನೆ ನಡೆದಿದ್ದು, ಈ ದುಷ್ಕರ್ಮಿ ಮಗುವನ್ನು 100 ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಮಾಡಿದ್ದು ಮಾತ್ರವಲ್ಲ, ಅದರ ವಿಡಿಯೋ ವನ್ನು ಲೈವ್ ಸ್ಟ್ರೀಮ್ ಕೂಡ ಮಾಡಿದ್ದಾನೆ.
ಆತ ಮಗುವಿನ ಹುಟ್ಟಿನಿಂದ ಮಗುವಿಗೆ ಆರು ವರ್ಷ ಪ್ರಾಯವಾಗುವ ತನಕ ನಿರಂತರ ಅತ್ಯಾಚಾರ ಮಾಡುತ್ತಿದ್ದ. ಸ್ಟೀಫನ್ ಡೋಗ್ಲಾಸ್ ಕ್ರೂಕ್ ಎಂಬ 29 ವರ್ಷದ ರೇಪಿಸ್ಟ್ ಗೆ ಈ ಸಂಬಂಧಿಸಿ ಗರಿಷ್ಟ ಶಿಕ್ಷೆ ವಿಧಿಸಲಾಗಿದೆ.
ಕೆಲವೊಮ್ಮೆ ಈತ ಅತ್ಯಾಚಾರದ ವಿಡಿಯೋ ಮಾಡಿ ತನ್ನ ಫಾಲೋವರ್ಸ್ ಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ತೋರಿಸುತ್ತಿದ್ದ. 2018 ರಲ್ಲಿ ಈ ರಾಕ್ಷಸನಿಂದ ಮಗುವನ್ನು ರಕ್ಷಿಸಿ ಈತನನ್ನು ಪೊಲೀಸರು ಬಂಧಿಸಿದ್ದರು.

Leave a Reply