ಭಾರತ, ರಷ್ಯಾ ಮತ್ತು ಚೀನಾ ದೇಶಗಳಲ್ಲಿ ಉತ್ತಮ ಗಾಳಿ ಮತ್ತು ನೀರು ಇಲ್ಲ ಎಂದು ಅಮೇರಿಕಾದ ಅಧ್ಯಕ್ಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  ಈ ದೇಶಗಳು ಪರಿಸರವನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ, ಮಾತ್ರವಲ್ಲ ಈ ದೇಶಗಳು ಈ ಜವಾಬ್ದಾರಿಯ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪರಿಸರ ಮಾಲಿನ್ಯ ಮತ್ತು ಸ್ವಚ್ಛತೆಯ ಬಗ್ಗೆ ಈ ದೇಶಗಳು ಹೆಚ್ಚು ಚಿಂತಿತವಾಗಿಲ್ಲ ಎಂದು ಬ್ರಿಟಿಶ್ ಚಾನೆಲ್ ಐಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದರು.  “ಅಮೆರಿಕ ವಿಶ್ವದ ಸ್ವಚ್ಛ ದೇಶಗಳಲ್ಲಿ ಒಂದಾಗಿದೆ. ಇದು ಅಂಕಿಗಳಲ್ಲೂ ಸಾಬೀತಾಗಿದೆ. ಇನ್ನೂ ಉತ್ತಮಗೊಳ್ಳುತ್ತಿದೆ. ಅದೇ ಸಮಯದಲ್ಲಿ, ಭಾರತ, ಚೀನಾ ಮತ್ತು ರಷ್ಯಾಗಳಂತಹ ರಾಷ್ಟ್ರಗಳಿಗೆ ಶುಚಿತ್ವ ಮತ್ತು ಮಾಲಿನ್ಯದ ಬಗ್ಗೆ ಸ್ಪಷ್ಟ ಪರಿಜ್ಞಾನ ಇಲ್ಲ. ಭಾರತವನ್ನೂ ಒಳಗೊಂಡಂತೆ ಅನೇಕ ದೇಶಗಳಲ್ಲಿ ಸಾಕಷ್ಟು ಸ್ವಚ್ಛ ಗಾಳಿಯಿಲ್ಲ. ಸ್ವಚ್ಛವಾದ ನೀರಿಲ್ಲ. ನೀವು ಕೆಲವು ನಗರಗಳಿಗೆ ಹೋದರೆ … ನಾನು ಈ ನಗರಗಳಿಗೆ ಹೆಸರಿಸುವುದಿಲ್ಲ.. ಆದರೆ ನಾನು ಅದನ್ನುಯ್ ಪಟ್ಟಿ ಮಾಡಬಲ್ಲೆ. ನೀವು ಈ ನಗರಗಳಿಗೆ ಹೋದರೆ ನಿಮಗೆ ಉಸಿರಾಡಲು ಸಾಧ್ಯವಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.

 

Leave a Reply