ಬೆಂಗಳೂರು : ಪ್ರಮುಖ ಮಾನವಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಮಾತೃ ದಿನವಾದ ಮೇ 12ರಂದು ಅವಳಿ ಮಕ್ಕಳಿಗೆ ಜನ್ಮನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 46 ವರ್ಷದ ಶರ್ಮಿಳಾ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದರು. ನಿಕ್ಸ್ ಸಾಕ್ಷಿ, ಓಟ್ಟಂ ತಾರ ಎಂದು ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ತಾಯಿ ಮಕ್ಕಳು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಗೈನಾಲಜಿಸ್ಟ್ ಡಾ. ಶ್ರೀಪಾದ ವಿನೇಕರ್ ಹೇಳಿದರು. ಶರ್ಮಿಳಾರ ಜೊತೆ ಅವರ ಬ್ರಿಟಿಷ್ ಪ್ರಜೆ ಪತಿ ಡೆಸ್ಮಂಡ್ ಕೌಟಿನ್ನೂ ಇದ್ದರು. ಅಮ್ಮಂದಿರ ದಿನದಲ್ಲಿ ಮಕ್ಕಳ ಜನನ ಆಕಸ್ಮಿಕವಾಗಿತ್ತು ಎಂದು ಶರ್ಮಿಳಾ ಮತ್ತು ಅವರ ಪತಿ ಹೇಳಿದರು. ಯಾವತ್ತೂ ಮಾತೃ ದಿನದಲ್ಲಿ ಹೆರಿಗೆ ಮಾಡಿಸಿದ ನೆನಪಿಲ್ಲ ಎಂದು ವೈದ್ಯರೂ ಕೂಡ ತಿಳಿಸಿದರು.

‘ಇರೋಮ್ ಶರ್ಮಿಳಾ,2000 ನೆಯ ಇಸವಿಯಲ್ಲಿ ತನ್ನ 28 ನೆಯ ವಯಸ್ಸಿನಲ್ಲಿ ಹೋರಾಟ ಆರಂಭಿಸಿ, ಮಣಿಪುರಕ್ಕೆ ಸಂಬಂಧಿಸಿದ ಸಶಸ್ತ್ರ ದಳದ ವಿಶೇಷಾಧಿಕಾರ ಕಾನೂನನ್ನು ತೆಗೆದುಹಾಕಬೇಕು ಎಂದು ಸರಕಾರದ ವಿರುದ್ಧ ಆಜೀವಪರ್ಯಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ‘ಮಣಿಪುರದ ಐರನ್ ಲೇಡಿ’ ಎಂದು ಹೆಸರುಪಡೆದಿದ್ದಾರೆ.

Leave a Reply