ಕಪಿಲ್ ದೇವ್ ನಾಯಕತ್ವದಲ್ಲಿ ಬಾರತೀಯ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಜಯಿಸಿದ ಸುವರ್ಣ ನಿಮಿಷಗಳು ಚಲನ ಚಿತ್ರವಾಗಿ ಮೂಡಿ ಬರಲಿದೆ. 1983ರ ಈ ವಿಶ್ವ ವಿಜಯವನ್ನು ಪ್ರತಿಯೊಬ್ಬ ಭಾರತೀಯ ಅಭಿಮಾನದಿಂದ ಸ್ಮರಿಸುತ್ತಿರುತ್ತಾನೆ.

“83” ಎಂಬ ಹೆಸರಿನಲ್ಲಿ ಕಬೀರ್ ಖಾನ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ನಿರ್ವಹಿಸಲಿದ್ದಾರೆ. ಖ್ಯಾತ ಚಿತ್ರನಟ ಅಲ್ಲು ಅರ್ಜುನ್ ಒಂದು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈಗಾಗಲೇ ಚಿತ್ರಕತೆ ಸಿದ್ಧವಾಗಿದೆ.

ಈ ವಿಶ್ವಕಪ್ ಗೆಲುವಿನ ಕುರಿತಾಗಿ ಅಧ್ಯಯನಕ್ಕೆ ಯಾವುದೇ ಪುಸ್ತಕವಿಲ್ಲ. ಕಳೆದೆರಡು ವಾರಗಳಿಂದ ಲಾಡ್ರ್ಸ್‍ನಲ್ಲಿದ್ದೆ, ಈ ವಿಶ್ವಕಪ್ ಕುರಿತು ಬಹಳ ಉತ್ಸಾಹದಿಂದ ಹಲವು ವಿಚಾರಗಳನ್ನು ಸಂಗ್ರಹಿಸಿದೆ. ಈ ಹಿಂದೆ 1983 ಎಂಬ ಹೆಸರಲ್ಲಿ ನಿವಿನ್ ಪೋಲಿಯ ನಾಯಕತ್ವದಲ್ಲಿ ಮಲಯಾಳಮ್ ನಲ್ಲಿ ಒಂದು ಚಿತ್ರ ತೆರೆ ಕಂಡಿತ್ತು. ಸಚಿನ್ ತೆಂಡೂಲ್ಕರ್, ಕ್ರಿಕೆಟ್ ಮುಂತಾದ ಎಲ್ಲ ವಿಚಾರಗಳನ್ನೊಳಗೊಂಡ ಈ ಚಿತ್ರವನ್ನು ಜನರು ಉತ್ಸಾಹದಿಂದ ಸ್ವೀಕರಿಸಿದ್ದರು.

Leave a Reply