The Islands of Twins: Philippines village home to 100 identical twins baffles doctors, is probably second such place with twinning phenomenon after Kerala in India

ಫಿಲಿಪ್ಪೀನ್ಸ್: ಅಲ್‍ಬಾದ್ ಫಿಲಿಪ್ಪೀನ್ಸ್‍ನ ಪ್ರಕೃತಿ ಸುಂದರ ಸ್ಥಳವಾಗಿದೆ. ಇಲ್ಲಿನ ಜನಸಂಖ್ಯೆ 15000ವೂ ಇಲ್ಲ. ಆದರೆ ದ್ವೀಪಕ್ಕೆ ಮೊದಲ ಬಾರಿಬರುವ ಯಾರಿಗೂ ಆಶ್ಚರ್ಯವಾಗಬಹುದು ದ್ವೀಪದಲ್ಲಿ ಒಂದೇ ತೆರನಾದ ಜನರು ಕಾಣ ಸಿಗುತ್ತಾರೆ.ಯಾಕೆಂದರೆ ಈ ದ್ವೀಪದಲ್ಲಿ100 ಜೋಡಿ ಅವಳಿಗಳಿದ್ದಾರೆ.

ಹುಟ್ಟುವವರಲ್ಲಿ ಇಲ್ಲಿ ಅವಳಿಗಳ ಸಂಖ್ಯೆ ಹೆಚ್ಚುಗುರುತಿಸಲು ಕಷ್ಟವಿರುವ 22 ಅವಳಿಗಳು ಮತ್ತು ಗುರುತಿಸಲು ಸಾಧ್ಯವಿಲ್ಲದ 78 ಅವಳಿಗಳು ಇಲ್ಲಿವೆ. ಒಂದೆ ರೀತಿಯ ಬಟ್ಟೆ ಧರಿಸಿ ಹೊರಗೆ ಬರುವಿವರರನ್ನು ದ್ವೀಪದೊಳಗಿರುವವರಿಗೆ ಗುರುತಿಸಲು ಕಷ್ಟವಾಗುತ್ತದೆ. ಇಲ್ಲಿನ ಅವಳಿಜವಳಿ ಮಕ್ಕಳ ಕತೆ ಜಗತ್ತಿನಲ್ಲಿ ಸುಪ್ರಸಿದ್ಧಿ ಪಡೆದಿದೆ.

ನಾಲ್ಕು ತಿಂಗಳ ಜಿಯಾನ್,ಜಾನ್ ದ್ವೀಪದ ಕಡಿಮೆ ವಯಸ್ಸಿನ ಅವಳಿಗಳು. 80 ವರ್ಷದ ಯುಡೋಸಿಮೊರಾಸು ಮತ್ತು ಆಂಟಾನಿಯೊ ಮೊರಾಸು ದ್ವೀಪದಲ್ಲಿ ಅತಿ ಹಿರಿಯ ಅವಳಿಗಳು. 2015ರಲ್ಲಿ 12 ಜೋಡಿ ಅವಳಿಗಳು ದ್ವೀಪದಲ್ಲಿ ಹುಟ್ಟಿವೆ.

ನೋಡಲು ಒಂದೇ ರೀತಿ ಕಾಣುವುದರಿಂದ ಹಲವು ಸಮಸ್ಯೆಗಳು ದ್ವೀಪದಲ್ಲಿ ನಡೆಯುತ್ತಿವೆ. ಅವಳಿಗಳಾದ ಆಂಟಾನಿಯೊ,ಯುಡೊಸ್ಯ ಎನ್ನುವ ಯುವತಿಯರಿಗೆ ಇಂತಹ ಅನುಭವಗಳಾಗಿವೆ. ಇವರು ಒಂದು ಘಟನೆಯನ್ನು ವಿವರಿಸಿದ್ದಾರೆ. ಮದುವೆಯಾದ ಹೊಸದರಲ್ಲಿ ಆಂಟಾನಿಯೊದ ಪತಿಗೆ ಪತ್ನಿ ಯಾರೆಂದು ಗೊತ್ತಾಗುತ್ತಿರಲಿಲ್ಲ. ಇದು ದೊಡ್ಡ ಸಮಸ್ಯೆ ಸೃಷ್ಟಿಗೆ ಕಾರಣವಾಯಿತು. ನಂತರ ಆಂಟಾನಿಯೊ ಗಂಡನಿಗೆ ತನ್ನ ಮೂಗಿನಲ್ಲಿರುವ ಗಾಯದ ಕಲೆಯನ್ನು ತೋರಿಸಿಕೊಟ್ಟುಸಮಸ್ಯೆ ಬಗೆಹರಿಸಿದ್ದಳು.

ದೀಪದಲ್ಲಿ ಅವಳಿ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ದ್ವೀಪ ವಾಸಿಗಳು ಹಲವು ಕಾರಣಗಳನ್ನು ಹೇಳುತ್ತಾರೆ. ಆದರೆ ಈ ಕುರಿತು ಈವರೆಗೆ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ. ಅಂತಾರಾಷ್ಟ್ರೀಯ ಮಾಧ್ಯಮಗಳು ಸಹ ದ್ವೀಪದ ಅವಳಿಜವಳಿಗಳ ಕತೆಯನ್ನು ವರದಿ ಮಾಡಿವೆ. ಈ ನಂತರ ಈ ಕುರಿತು ಅಧ್ಯಯನಕ್ಕೆ ಕೆಲವರು ಸಿದ್ಧರಾಗಿದ್ದಾರೆ.

Leave a Reply