ನೈರೋಬಿ: ಕೆನ್ಯದ ನೈರೋಬಿ ಸಿಟಿಯಲ್ಲಿ ಪುಂವಾನಿ ಹೆರಿಗಾಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ಹನ್ನೆರಡು ಶಿಶುಗಳ ಮೃತದೇಹ ಪತ್ತೆಯಾಗಿದೆ.ಘಟನೆಯಲ್ಲಿ ನೈರೋಬಿ ಗವರ್ನರ್ ಮೈಕ್ ಸೋಂಕ ತನಿಖೆಗೆ ಆದೇಶಿಸಿದ್ದಾರೆ.

ದೂರುಗಳು ವ್ಯಾಪಕವಾಗಿ ಕೇಳಿಬಂದದ್ದರಿಂದ ಗವರ್ನರ್ ಆಸ್ಪತ್ರೆಗೆ ಭೇಟಿನೀಡಿದರು. ನಿಗೂಢ ರೀತಿಯಲ್ಲಿ ಶಿಶುಗಳ ಮೃತದೇಹಗಳನ್ನು ನಿರ್ಲಕ್ಷ್ಯವಾಗಿ ಪೆಟ್ಟಿಗೆ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ಇರಿಸಲಾಗಿತ್ತುಎಂದು ಅವರು ತಿಳಿಸಿದರು.

ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ಸುಪರಿಡೆಂಟ್ , ಡ್ಯೂಟಿ ಡಾಕ್ಟರ್‍ಸಹಿತ ಇರುವವರನ್ನು ಅಮಾನತುಗೊಳಿಸಲಾಗಿದೆ.ಪಂವಾನಿಯಲ್ಲಿನ ಘಟನೆ ಬೆಚ್ಚಿಬೀಳುವಂತಹದ್ದು ಮತ್ತು ಯಾವುದೇ ಕುಟುಂಬದಲ್ಲಿಯೂ ಸಂಭವಿಸಬಾರದ್ದು ಎಂದು ಮೇಯರ್ ಹೇಳಿದರು.

Leave a Reply