• ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ . ಇದು ಅಪಾಯಕಾರಿ ರೋಗಗಳಿಂದ ಶರೀರಕ್ಕೆ ಸಂರಕ್ಷಣೆ ಕೊಡುತ್ತದೆ.

  • ಇದರಲ್ಲಿರುವ anti ಪೈರಾಟಿಕ್ ಅಂಶವು ಪ್ರಾಣ ಹಾನಿಕಾರಕವಾದ ರೋಗಗಳ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಆಗಿದೆ. ಮಾತ್ರವಲ್ಲ, ರಕ್ತ ಕಣಗಳನ್ನು ವೃದ್ಧಿಸುತ್ತದೆ.

  • ಡೆಂಗ್ಯೂ ಮಲೇರಿಯಾ ರೋಗಿಗಳು ಅಮೃತ ಬಳ್ಳಿಯನ್ನು ಜೇನಿನ ಜೊತೆ ಬೆರೆಸಿ ಸೇವಿಸಿದರೆ ತಾಪ ಇಳಿಮುಖ ವಾಗುತ್ತದೆ.

  • ಹೊಟ್ಟೆಯ ಸಮಸ್ಯೆಗೆ ಅಮೃತ ಬಳ್ಳಿ ಬಹಳ ಉಪಯುಕ್ತ. ನೆಲ್ಲಿಕಾಯಿ ಜೊತೆ ಬೆರೆಸಿ ಸೇವಿಸಿದರೆ ಹೊಟ್ಟೆಯ ಸಮಸ್ಯೆ ಗುಣವಾಗುತ್ತದೆ.

  • ಅಮೃತ ಬಳ್ಳಿಯಿಂದ ನೆನಪಿನ ಶಕ್ತಿಯೂ ವೃದ್ಧಿಯಾಗುತ್ತದೆ.

  • ಅಜೀರ್ಣ ಸಮಸ್ಯೆ ಇದ್ದರೆ ಅಮೃತ ಬಳ್ಳಿಯ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಿದರೆ ಸುಲಭವಾಗಿ ಜೀರ್ಣ ಆಗುತ್ತದೆ.

  • ಅಮೃತ ಬಳ್ಳಿಯ ರಸ ಶುಂಠಿ ಪುಡಿ ಮತ್ತು ಹಾಲು ಬೆರೆಸಿ ಸೇವಿಸಿದರೆ ಬಿಕ್ಕಳಿಕೆ ನಿವಾರಣೆ ಆಗುತ್ತದೆ.

  • ಅಮೃತ ಬಳ್ಳಿಯ ಕಷಾಯಕ್ಕೆ ಜೇನು ಬೆರೆಸಿ ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.

Leave a Reply