ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಷೋ ನೋಡದವರಿಲ್ಲ. ಹಾಸ್ಯ ನಟ ಕಪಿಲ್ ತನ್ನ ಪಂಚಿಂಗ್ ಡೈಲಾಗ್ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಾರೆ. ಅಂತಹ ಮಾಂತ್ರಿಕ ಶಕ್ತಿ ಕಪಿಲ್ ಶರ್ಮಾರಿಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಟಿ ಹಲವು ಬಾರಿ ಕಪಿಲ್ ಷೋಗೆ ಭೇಟಿ ಕೊಟ್ಟಿದ್ದಾರೆ. ಮಾತಿನ ಮಧ್ಯೆ ಪ್ರಿಯಾಂಕಾ ಕಪಿಲ್ ರಿಗೆ ಪ್ರಶ್ನೆಯನ್ನು ಕೇಳುವುದಾಗಿ ಒತ್ತಾಯಿಸಿದಾಗ ಕಪಿಲ್ ಅದಕ್ಕೆ ಸಮ್ಮತಿ ನೀಡಿದರು. ಒಂದು ವೇಳೆ ಪತ್ನಿ ಮತ್ತು ತಾಯಿ ಇಬ್ಬರೂ ಒಂದೇ ಸಮಯದಲ್ಲಿ ಕರೆದರೆ ಯಾರ ಬಳಿ ಮೊದಲು ಹೋಗುತ್ತೀರಿ ಎಂದು ಪ್ರಿಯಾಂಕಾ ಪ್ರಶ್ನೆ ಕೇಳಿದರು. ಆ ಸಮಯದಲ್ಲಿ ಕಪಿಲ್ ಶರ್ಮಾರ ತಾಯಿ ಪ್ರೇಕ್ಷಕರ ಸಾಲಿನಲ್ಲಿ ಕೂತಿದ್ದರು.

ಕಪಿಲ್ ಉತ್ತರಿಸುತ್ತಾ, ಯೆ ಅಲಾಗ್ ಅಲಾಗ್ ಹೋತಿ ಹಿ ನಹಿನ್. ಸಾಥ್ ಮೇ ರೆಹತಿ ಹೈನ್, ಅಂದರೆ ಅವರಿಬ್ಬರೂ ಬೇರೆ ಬೇರೆಯಾಗಿರುವುದೇ ಇಲ್ಲ ಒಟ್ಟೊಟ್ಟಿಗೇ ಇರುತ್ತಾರೆ ಎಂದು ಹೇಳಿದರು. ಆದರೆ ಕಪಿಲ್ ರವರ ತಾಯಿ, ಮಗ ಮೊದಲು ಗಿನ್ನಿಯ(ಪತ್ನಿ) ಬಳಿ ಹೋಗುವುದಾಗಿ ಹೇಳಿದರು.

ಪ್ರಿಯಾಂಕ್ ಮತ್ತೆ ಕಪಿಲ್ ರನ್ನು ಕಾಲೆಳೆಯಲು ತೊಡಗಿದರು, ತಾಯಿ ಮತ್ತು ಪತ್ನಿಯ ನಡುವೆ ವಿರಸ ಆದರೆ ಯಾರನ್ನು ಮೊದಲು ಸಮಾಧಾನ ಪಡಿಸುತ್ತಿ ಏನು ಪ್ರಿಯಾಂಕಾ ಕೇಳಿದಾಗ ಕಪಿಲ್ ತಾಯಿ ಆತ ಪತ್ನಿಯನ್ನೇ ಸಮಾಧಾನ ಪಡಿಸಬಹುದು ಎಂದು ಹೇಳಿದರು. ಆಗ ಕಪಿಲ್, ಮದುವೆಯ ಬಳಿಕ ಹುಡುಗ ಹುಡುಗಿ ಬದಲಾಗುತ್ತಾರೆ ಎಂದು ಹೇಳುತ್ತಾರೆ, ಆದರೆ ನನ್ನ ತಾಯಿಯೇ ಬದಲಾಗಿದ್ದಾರೆ ಎಂದು ಹೇಳಿದರು. ಎಲ್ಲರೂ ಈ ಕ್ಷಣವನ್ನು ನಕ್ಕು ಎಂಜಾಯ್ ಮಾಡಿದರು.

LEAVE A REPLY

Please enter your comment!
Please enter your name here