ಭಾರತೀಯ ಜನತಾ ಪಕ್ಷದ ಮಾಜಿ ಶಾಸಕಿ, ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಸೋದರಳಿಯ ರಾಹುಲ್ ಲೋಧಿ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರ ಕಾರು ಮೋಟಾರು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಲಿಯಾದವರನ್ನು ಬರೇತಿ ಗ್ರಾಮದ ನಿವಾಸಿಗಳಾದ ಬ್ರಿಜೇಂದ್ರ ಅಹಿರ್ವಾರ್ (26) ಮತ್ತು ನಂದ್ರಾಮ್ ಅಹಿರ್ವಾರ್ (30) ಎಂದು ಗುರುತಿಸಲಾಗಿದೆ.

ಜಿಲ್ಲೆಯ ಪಾಪವಾನಿ ಗ್ರಾಮದ ಸಮೀಪದ ಬ್ರಿಜೇಂದ್ರ ಅಹಿರ್ವಾರ್ ಅವರ ಮೋಟಾರ್ ಸೈಕಲ್‌ಗೆ ಎಸ್ಯುವಿ ಕಾರು ಡಿಕ್ಕಿ ಹೊಡೆದಾಗ ಲೋಧಿ ಚಾಲಕನ ಸೀಟಿನಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿ ಗಣೇಶ್ ಅಹಿರ್ವಾರ್ (48) ನೀಡಿದ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಅಪಘಾತದ ಬಳಿಕ ಲೋಧಿ ಘಟನಾ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಆದರೆ ಲೋಧಿ ಈ ಅಪಘಾತವನ್ನು ನಿರಾಕರಿಸಿದ್ದು, ತನ್ನ ವಾಹನ ಢಿಕ್ಕಿ ಹೊಡೆದಿಲ್ಲ ಎಂದು ಹೇಳಿದ್ದಾರೆ.

Leave a Reply