ಲೆಬನಾನ್ ನಲ್ಲಿ ಭಿಕ್ಷುಕಿಯೋರ್ವಳು ಕೇವಲ ಭಿಕ್ಷೆ ಬೇಡಿ ಆರು ಕೋಟಿ ರೂಪಾಯಿ ಸಂಪಾದಿಸಿದ ಘಟನೆ ವರದಿಯಾಗಿದೆ. ವಫಾ ಮುಹಮ್ಮದ್ ಅವಾದ್ ಎನ್ನುವ ಮಹಿಳೆ ಕಳೆದ ಹತ್ತು ವರ್ಷಗಳಲ್ಲಿ ಭಿಕ್ಷೆ ಬೇಡಿ ಬ್ಯಾಂಕ್ ಖಾತೆಯಲ್ಲಿ ಜಂಯಿಸಿದ್ದು ಬರೋಬ್ಬರಿ 6.37 ಕೋಟಿ ರೂಪಾಯಿ. ವಫಾ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಾಗಿ ಬ್ಯಾಂಕ್ ಖಾತೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಇರುವುದಾಗಿ ಕಂಡು ಬಂದಿದೆ.

ಸಿಡೊನ್ ನಿವಾಸಿಯಾಗಿರುವ ಈ ಮಹಿಳೆ ಇಡೀ ದಿನ ಲೆಬನಾನ್ ಆಸ್ಪತ್ರೆಯ ಹೊರಗೆ ಕೂತು ಭಿಕ್ಷೆ ಬೇಡುತ್ತಿದ್ದಳು. ಎಲ್ಲರೂ ಆಕೆಯನ್ನು ಸಾಮಾನ್ಯ ಭಿಕ್ಷುಕಿ ಎಂದು ಪರಿಗಣಿಸಿದ್ದರು. ಆದರೆ ಇದೀಗ ಆಕೆ ಕೋಟ್ಯಧಿಪತಿ ಭಿಕ್ಷುಕಿ ಎಂದು ಎಲ್ಲರೂ ಹೌಹಾರಿದ್ದಾರೆ. ಆಕೆ ಬ್ಯಾಂಕ್ ಗೆ ನೀಡಿರುವ ಚೆಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Leave a Reply