ಸುಮಾರು 300 ಬೆದರಿಕೆ ಕರೆಗಳು ಮತ್ತು ಮೆಸೆಜ್ ಗಳ ಬಳಿಕ ಕೊನೆಗೂ ಕೊಲ್ಕತ್ತಾದಲ್ಲಿ ಬೀಫ್ ಫೆಸ್ಟಿವಲ್ ಆಯೋಜಿಸುವುದನ್ನು ರದ್ದು ಗೊಳಿಸಲಾಗಿದೆ.
ಈ ಹಿಂದೆ ಬೆದರಿಕೆಗಳು ಬಂದ ನಿಟ್ಟಿನಲ್ಲಿ ಬೀಫ್ ಫೆಸ್ಟಿವಲ್ ಹೆಸರನ್ನು ಆಯೋಜಕರು ಬೀಪ್ ಫೆಸ್ಟಿವಲ್ ಎಂದು ಆಯೋಜಕರು ಬದಲಿಸಿದ್ದರು.
ಜೂನ್ 23 ಕ್ಕೆ ನಡೆಯಬೇಕಿದ್ದ ಈ ಕಾರ್ಯಕ್ರಮದಲ್ಲಿ ಭೀಫ್ ಮಾತ್ರವಲ್ಲ, ಪೋರ್ಕ್ ಖಾದ್ಯಗಳನ್ನು ಕೂಡ ಇಡಲಾಗುತ್ತಿತ್ತು..ಇದೊಂದು ಸಾಮಾನ್ಯ ಕಾರ್ಯಕ್ರಮವಾಗಿದ್ದು, ಯಾವುದೇ ರಾಜಕೀಯ ಹಿತಾಸಕ್ತಿ ಇದಕ್ಕೆ ಇರಲಿಲ್ಲ ಎಂದು ಫೆಸ್ಟಿವಲ್ ಆಯೋಜಕರು ಹೇಳಿದ್ದಾರೆ…

ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಯಾಕೆಂದರೆ ಎಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ. ಪರಿಸ್ಥಿತಿ ಕೈಮೀರಿ ಹೋಗಬಹುದು ಎಂದು ಭಯವಾಯಿತು. ಈ ನಿಟ್ಟಿನಲ್ಲಿ ನಾವು ಇದನ್ನು ರದ್ದು ಗೊಳಿಸಿದ್ದೇವೆ. ಕೆಲವು ಬೆಂಬಲ ಕರೆಗಳು ಬಂದಿದ್ದವು. ಆದರೆ ಇನ್ನು ಕೆಲವು ನೇರ ಬೆದರಿಕೆ ಕರೆಗಳು ಬಂದಿದ್ದವು ಎಂದು ಸಂಘಟಕರು ಹೇಳಿದ್ದಾರೆ.

Leave a Reply