ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳದ ಬೆಳವಣಿಗೆ ಆದೇಶ ಜಾರಿಗೆ ಬರುವ ಮುನ್ನವೇ ಮುಖ್ಯಮಂತ್ರಿ ಅದಕ್ಕೆ ಬ್ರೇಕ್ ನೀಡಿದ್ದಾರೆ.

ಸರಾಸರಿ ಶೇ.18 ರಷ್ಟು ಹೆಚ್ಚಳ ಮಾಡಿ ಹೊರಡಿಸಿದ್ದ ಆದೇಶ ಜಾರಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಕೊನೆ ಘಳಿಗೆಯಲ್ಲಿ ತಡೆಯಾಜ್ಞೆ ನೀಡಿದ್ದು, ಇದೀಗ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಕಾಣುತ್ತಿರುವ ತೈಲ ದರದಿಂದಾಗಿ ಸಾರಿಗೆ ನಿಗಮವು ಪ್ರತಿ ತಿಂಗಳು ೬೦ ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದಂತಾಗಿತ್ತು. ಮಾತ್ರವಲ್ಲ , ನಿರ್ವಹಣೆ ಮತ್ತಿತರ ಕಾರಣ ನೀಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮವು ಬಸ್ ಪ್ರಯಾಣ ದರ ಏರಿಕೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿತ್ತು. ಅದನ್ನು ಪರಿಗಣಿಸಿ ರಾಜ್ಯ ಸರಕಾರ ಬಸ್ ದರ ಏರಿಕೆಗೆ ಅವಕಾಶ ಕಲ್ಪಿಸಿತ್ತು.

Leave a Reply