ಲಂಡನ್: ಈ ಬಾರಿಯ ವಿಶ್ವಕಪ್ ಪಂದ್ಯಾವಳಿ ವೀಕ್ಷಿಸಲು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಟಿಕೆಟ್ ಖರೀದಿಸಿದ್ದಾರೆ! ಪಂದ್ಯಗಳನ್ನು ನೋಡಲು ಎರಡು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವರು ಎಂದು ಪಂದ್ಯಾವಳಿಯ ನಿರ್ದೇಶಕ ಸ್ಟೀವ್ ಎಲ್ ವರ್ಥಿ ಹೇಳಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಆಗಲಿದೆ. ಒಂದು ಲಕ್ಷ ಹತ್ತು ಸಾವಿರ ಮಹಿಳೆಯರು ಪಂದ್ಯ ನೋಡಲು ಟಿಕೆಟ್ ಖರೀದಿಸಿದ್ದಾರೆ. 16 ವರ್ಷದೊಳಗಿನ ಒಂದು ಲಕ್ಷ ಯುವಜನರು ಕೂಡ ಪಂದ್ಯ ನೋಡಲಿದ್ದಾರೆ. ಯುವಜನರು ಈ ಕ್ರೀಡೆಯತ್ತ ಆಕರ್ಷಿತರಾಗಲು ಪಂದ್ಯಾವಳಿ ಸ್ಫೂರ್ತಿ ನೀಡಲಿದೆ ಎಂದರು.
ಎರಡು ಲಕ್ಷ ಜನರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದು ಇದೇ ಮೊದಲ ಬಾರಿ, ಯುವಜನರು ಪಂದ್ಯ ನೋಡಲು ಪಂದ್ಯಾವಳಿ ಸ್ಪೂರ್ತಿ ನೀಡಲಿದೆ ಎಂದರು.

Leave a Reply