ಸೆಲೆಬ್ರಿಟಿಗಳು ತಮ್ಮ ಗುರುತು ಸಿಗದಂತೆ ವೇಷ ಬದಲಿಸಿ ಕೆಲವೊಮ್ಮೆ ಸಾರ್ವಜನಿಕರ ಮುಂದೆ ಪ್ರತ್ಯಕ್ಷಗೊಳ್ಳುತ್ತಾರೆ. ಈ ಹಿಂದೆ ಅಮೀರ್ ಖಾನ್ ಮತ್ತು ಸೋನು ನಿಗಮ್ ಈ ರೀತಿ ವೇಷ ಬದಲಿಸಿ ಸುತ್ತಾಡಿದ ವಿಡಿಯೋ ತುಂಬಾ ವೈರಲ್ ಆಗಿತ್ತು. ಇದೀಗ ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ವೇಷ ಬದಲಿಸಿ ಚೆನ್ನೈನ ಟಿ.ನಗರದಲ್ಲಿ ಶಾಪಿಂಗ್ ಮಾಡಿದ್ದು, ಅವರ ಫೋಟೋ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನ ಓಪನರ್ ಮ್ಯಾಥ್ಯೂ ಇನ್ಸ್ಟಾಗ್ರ್ಯಾಂನಲ್ಲಿ ಕೆಲವು ಫೋಟೋಗಳು ಹಾಗೂ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ವೇಷ ಬದಲಿಸಿ ಶಾಪಿಂಗ್ ಮಾಡುವುದನ್ನು ಕಾಣಬಹುದಾಗಿದೆ. 47 ವರ್ಷ ವಯಸ್ಸಿನವರಾದ ಹೇಡನ್ ರಿಗೆ ಅವರದ್ದೇ ದೇಶದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್, ಟಿ.ನಗರದಲ್ಲಿ ಶಾಪಿಂಗ್ ಮಾಡುವಂತೆ ಸವಾಲೊಡ್ಡಿದ್ದರು.

Leave a Reply