Image: thebetterindia

ಕಂದಿವಾಲಿ ರೈಲ್ವೆ ಸ್ಟೇಷನ್ ಸ್ಕೈ ವಾಕ್ ರಸ್ತೆಯಲ್ಲಿ 15 ಬಡ ಮಕ್ಕಳಿಗೆ ವರ್ಣಮಾಲೆ, ಚಿತ್ರಕಲೆ, ಗಣಿತ ಕಲಿಸುವ ಶಿಕ್ಷಕಿಯನ್ನು ನಿಮಗೆ ದಿನಾಲೂ ಕಾಣಲು ಸಾಧ್ಯವಿದೆ. ಹೌದು 22 ವರ್ಷದ ಹೆಮಂತಿ ಸೇನ್ ದಿನಾ ಈ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಹೆಚ್ಚಿನ ಮಕ್ಕಳು ಹತ್ತಿರದ ಸ್ಲಮ್ ನಲ್ಲಿ ವಾಸಿಸುವ ಭಿಕ್ಷುಕರ ಮಕ್ಕಳು.

2018 ರಲ್ಲಿ ಈ ಮಕ್ಕಳು ಹೇಮಂತಿ ಸೆನ್ ರವರ ಗಮನಕ್ಕೆ ಬಂದಿದ್ದು, ಅಂದಿನಿಂದ ಈ ಮಕ್ಕಳಿಗೆ ಶಿಕ್ಷಣ ನೀಡಿ ಇವರನ್ನು ಶಾಲೆಗೆ ಸೇರಿಸುವಂತೆ ಮಾಡಬೇಕು ಎಂಬ ಇಚ್ಛೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

thebetterindia

ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಭಿಕ್ಷೆ ಬೇಡುತ್ತಿದ್ದ ಈ ಬಡ ಮಕ್ಕಳ ದಯನೀಯ ಅವಸ್ಥೆ ಕಂಡು ಇವರಿಗೇನಾದರೂ ಮಾಡಬೇಕು ಅಂದುಕೊಂಡೆ. ಇವರಿಗೆ ಶಿಕ್ಷಣ ಎಂದರೆ ಎಂದು ಎಂದು ತಿಳಿದಿದೆಯೇ ಎಂಬ ಕುತೂಹಲ ಮೂಡಿತು. ಮಕ್ಕಳ ಹೆತ್ತವರನ್ನು ಭೇಟಿಯಾಗಿ ವಿಚಾರಿಸಿದೆ. ಅವರು ಮಕ್ಕಳ ಶಿಕ್ಷಣದ ಬಗ್ಗೆ ತಿಳಿಸಲು ನಿರಾಕರಿಸಿದರು. ಕೊನೆಗೆ ನಾನೇ ಬಂದು ಅವರಿಗೆ ಏನಾದರೂ ಕಲಿಸುತ್ತೇನೆ ಎಂದಾಗ, ಅವರು ನನ್ನ ಮಾತನ್ನು ತಪ್ಪಿಸಲು, ನಾವು ಮಕ್ಕಳನ್ನು ಶಾಲೆಯಿಂದ ತೆಗೆಯುತ್ತೇವೆ. ನೀವೇ ಅವರಿಗೆ ಕಲಿಸಿ, ಆಹಾರ ಕೊಡಿ, ಬಟ್ಟೆ ಕೊಡಿ ಎಂದರು.

ಆದರೆ ಹೇಮಂತಿ ಬಿಟ್ಟು ಕೊಡಲಿಲ್ಲ, ಮಕ್ಕಳನ್ನು ಶಾಲೆಗೆ ಸೇರಿಸಲು ತೊಡಗಿದರು. ಆದರೆ ಮಕ್ಕಳ ಹಾಜರಾತಿ ಸಮಸ್ಯೆ ಆದಾಗ ಸ್ವತಃ ತಾನೇ ಕಲಿಸುವುದಾಗಿ ನಿರ್ಧರಿಸಿ ದಿನಾ ಒಂದು ಗಂಟೆ ಅವರಿಗೆ ಕಲಿಸಲು ತೊಡಗಿದರು. ಈಗ ಈ ಉದ್ದೇಶಕ್ಕಾಗಿ ಒಂದು ಖಾಸಗಿ ಎನ್ಜಿಒ ಸ್ಥಾಪಿಸಿದ್ದಾರೆ ಹೇಮಂತಿ.

thebetterindia

ಸಾಮಾನ್ಯವಾಗಿ ಈ ಮಕ್ಕಳು ಭಿಕ್ಷೆ ಬೇಡಲು ನಿರಾಕರಿಸಿದಾಗ, ಅವರನ್ನು ಶಿಕ್ಷಿಸಲಾಗುತ್ತದೆ. ಕೆಲವೊಮ್ಮೆ, ಅವರ ಕಣ್ಣಿಗೆ ಮಸಾಲೆ ಪುಡಿ ಹಾಕುತ್ತಾರೆ. ಒಂದು ಗಂಟೆ ಓದಿನ ಬಳಿಕ ಅವರು ಭಿಕ್ಷೆ ಬೇಡುತ್ತಾರೆ ಎಂದು ಹೇಮಂತಿ ಹೇಳಿದರು.

ಹೇಮಂತಿಯವರ ಎನ್ಜಿಒ ದಲ್ಲಿ ಎಂಟು ಮಂದಿ ಸದಸ್ಯರಿದ್ದು, ಆ ತಂಡವು ಈ ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದಾಗಿನಿಂದ, ಮಕ್ಕಳಲ್ಲಿ ಗಣನೀಯ ಬದಲಾವಣೆ ಕಂಡು ಬರುತ್ತಿದೆ. ಮಕ್ಕಳು ಹಿಂದಿಗಿಂತ ಸ್ವಚ್ಛವಾಗಿರುತ್ತಾರೆ, ಚೆನ್ನಾಗಿ ಗ್ರಹಿಸಿ ಕಳಿಸುತ್ತಾರೆ.

“ಈ ಪ್ರಯಾಣ ಬಹಳ ಕಷ್ಟಕರವಾಗಿದೆ. 15 ಮಕ್ಕಳಲ್ಲಿ ಕನಿಷ್ಠ ಐದು ಮಂದಿ ಈ ವರ್ಷ ಶಾಲೆಗೆ ಪ್ರವೇಶಿಸಬಹುದೆಂದು ನಾನು ಹೇಳಬಹುದು. ಉಳಿದಂತೆ, ನಿಧಾನವಾಗಿ, ಉಳಿದಿರುವ ಮಕ್ಕಳನ್ನುನಿಧಾನವಾಗಿ ತಯಾರು ಮಾಡುತ್ತೇನೆ ಎಂದು ಹೇಮಂತಿ ಹೇಳುತ್ತಾರೆ.

thebetterindia

ಮೂಲ: thebetterindia
ಭಾವಾನುವಾದ: Idunammaooru

Leave a Reply