ಲಕ್ನೋ: ತನ್ನ ನೆಚ್ಚಿನ ಪಕ್ಷಕ್ಕೆ ಮತ ಹಾಕುವ ಬದಲು ಬೇರೆ ಪಕ್ಷಕ್ಕೆ ತಪ್ಪಿ ಮತ ಹಾಕಿದ ಕೋಪವನ್ನು ತನ್ನ ಕೈ ಬೆರಳಿನ ಮೇಲೆ ತೀರಿಸಿದ ಘಟನೆ ವರದಿಯಾಗಿದೆ. ಬಿಎಸ್ಪಿಗೆ ಮತ ಹಾಕ ಬೇಕು ಎಂದು ಬಯಸಿದ್ದ ದಲಿತ ಸಮುದಾಯದ ಮತದಾರ ತಪ್ಪಿ ಬಿಜೆಪಿ ಬಟನ್ ಒತ್ತಿದ್ದು, ಇದರಿಂದ ಕೋಪಗೊಂಡು ತನ್ನ ಕೈ ಬೆರಳನ್ನೇ ಕತ್ತರಿಸಿದ್ದಾನೆ.
ಉತ್ತರ ಪ್ರದೇಶದ ಬುಲಂದರ್‍ಶಾಹರ್ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ಪವನ್ ಕುಮಾರ್ ಕೈ ಬೆರಳು ಕಳೆದುಕೊಂಡ ಯುವಕ. ಈತನ ವಿಡಿಯೋ ತುಂಬಾ ವೈರಲ್ ಆಗಿದೆ. ವಿಡಿಯೋ ನೋಡಿ

Leave a Reply