ಲಕ್ನೌದಲ್ಲಿ ಮಕ್ಕಳ ಕಾಟ ತಾಳಲಾರದೆ ವೃದ್ಧ ರೊಬ್ಬರು ಆಳವಾದ ಚರಂಡಿಗೆ ಹಾರಿದ ಘಟನೆ ವರದಿಯಾಗಿದೆ.
ಲಕ್ನೋದ ಮಾನಾಕ್ ನಗರದ ವೃದ್ಧರೋರ್ವರು ಆಸ್ಪತ್ರೆಯ ಬಳಿ ಚರಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಅದೇ ಸಮಯದಲ್ಲಿ, ಸ್ಥಳದಲ್ಲೇ ಹಾಜರಿದ್ದ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಪೋಲಿಸ್ ತಕ್ಷಣವೇ ಸ್ಥಳಕ್ಕೆ ಬಂದು ವೃದ್ಧರ ಪ್ರಾಣ ಕಾಪಾಡಿದ್ದಾರೆ. ವೃದ್ಧರ ಹೆಸರು ನಾನಕ್ ಚಂದ್ರ ಮಿಶ್ರ ಎಂದಾಗಿದ್ದು, ವೃದ್ಧಾಪ್ಯದಲ್ಲಿ ಮಕ್ಕಳಿಂದ ಸಮಸ್ಯೆಯನ್ನು ಎಂದುರಿಸುತ್ತಿದ್ದರು ಎನ್ನಲಾಗಿದೆ.

Leave a Reply