ಆಪಲ್ ಕಂಪೆನಿಯ ನೌಕರರೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಗುಂಡಿಟ್ಟು ಸಾಯಿಸಿದ್ದು,ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಯನ್ನು ಆಪಲ್ ಕಂಪೆನಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ವಿವೇಕ್ ತಿವಾರಿ ಎಂದು ಗುರುತಿಸಲಾಗಿದೆ.

ಲಕ್ನೊದ ಗೋಮತಿ ನಗರದಲ್ಲಿ ಪೊಲೀಸ್ ಕಾಸ್ಟೇಬಲ್ ಗುಂಡಿಟ್ಟು ಕೊಂದಿದ್ದಾನೆ. ಕಾರನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೆ ಹೋಗಿದ್ದ ತಿವಾರಿಗೆ ಪೊಲೀಸ್ ಪೇದೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

ಐಫೋನ್ ಬಿಡಗಡೆ ಸಮಾರಂಭವನ್ನು ಮುಗಿಸಿ ಸಹೋದ್ಯೋಗಿಗಳೊಂದಿಗೆ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸಂದೇಹಾಧಾರದಲ್ಲಿ ಪೊಲೀಸರು ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದರು.ಆದರೆ ಕಾರು ನಿಲ್ಲಿಸದೆ ತಿವಾರಿ ಮತ್ತು ಸಂಗಡಿಗರು ಮುಂದಕ್ಕೆ ಹೋಗಿದ್ದರು.

ಗೋಮತಿ ನಗರ ಪೊಲೀಸ್ ಠಾಣೆಯ ಪೇದೆ ಪ್ರಶಾಂತ್ ಚೌಧರಿಯ ವಿರುದ್ಧ ಭಾರತ ದಂಡ ಸಂಹಿತೆ 302 ಪ್ರಕಾರ ಕೊಲೆ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ.
ಗುಂಡು ಹಾರಿಸಿ ತೀವ್ರ ಗಾಯಗೊಂಡಿದ್ದ ವಿವೇಕ್‍ರನ್ನು ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಅವರು ಅಲ್ಲಿ ಮೃತಪಟ್ಟರು. ಕಾರು ನಿಲ್ಲಿಸದಿರುವುದು ಕಾನ್ಸ್‍ಟೇಬಲ್ ಗುಂಡು ಹಾರಿಸಲು ಕಾರಣ ಎಂದು ಪೊಲೀಸರು ಹೇಳಿದ್ದಾರೆ.

Leave a Reply