26/11 ನ ಮುಂಬಯಿ ದಾಳಿಯನ್ನು ಕಣ್ಣಾರೆ ಕಂಡಿದ್ದ ಭಾರತೀಯ ವ್ಯಕ್ತಿ ಶ್ರೀಲಂಕಾ ಬಾಂಬ್ ದಾಳಿಯಲ್ಲೂ ಬಚಾವಾಗಿದ್ದಾರೆ.
2008ರಲ್ಲಿ ಮುಂಬಯಿಯ 26/11 ಉಗ್ರ ದಾಳಿ ಯನ್ನು ಕಣ್ಣಾರೆ ನೋಡಿದ್ದ ದುಬೈ ನಿವಾಸಿ ಭಾರತೀಯ-ಅಭಿನವ್ ಚಾರೀ 21 ಎಪ್ರಿಲ್ ನಂದು ಶ್ರೀಲಂಕಾ ದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಪತ್ನಿ ನವರೂಪ್ ಕೆ ಚಾರೀ ಯ ಜತೆ ಕೂದಲೆಳೆಯಲ್ಲಿ ಪಾರಾಗಿದ್ದಾರೆ.
ವಾಸ್ತವದಲ್ಲಿ ,ಅಭಿನವ್ ಹಾಗೂ ಅವರ ಪತ್ನಿ ಕೊಲಂಬೋ ನ ಸಿನಾಮನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಉಳಿದು ಕೊಂಡಿದ್ದರಾದರೂ ,ಸ್ಪೋಟದ ಸಂದರ್ಭದಲ್ಲಿ ಅವರು ಹೋಟೆಲ್ ನಲ್ಲಿ ಇರಲಿಲ್ಲ…

ಕೆಸ್ತರ ಪವಿತ್ರ ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದ ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ 5 ಚರ್ಚ್‌ಗಳು ಸೇರಿ 8 ಕಡೆಗಳಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟಿಸಿದ್ದು ೫ ಭಾರತೀಯರು ಸೇರಿದಂತೆ ಸಾವಿನ ಸಂಖ್ಯೆ 290 ದಾಟಿತ್ತು. ಲಂಕಾದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂಬ ಗುಪ್ತಚರ ವರದಿ ನಿರ್ಲಕ್ಷಿಸಿದ್ದರ ಪರಿಣಾಮ ನೂರಾರು ಮಂದಿ ಅಮಾಯಕರು ಜೇವತೆರಬೇಕಾಯಿತು. ಗುಡ್ ಫ್ರೈಡೆ ಬಳಿಕ ಕೈಸ್ತರ ಸಾಂಪ್ರದಾಯಿಕ ಈಸ್ಟರ್‌ ಆಚರಣೆ ಭಾನುವಾರ ನಡೆಯುತ್ತಿದ್ದ ಕಾರಣ ಚರ್ಚ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ವೇಳೆಯೇ ಚರ್ಚ್‌ಗಳಲ್ಲಿ ಸ್ಫೋಟ ಸಂಭವಿಸಿತ್ತು.

Leave a Reply