Image: indiatimes

ಪ್ರತಿ ದಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕೇಳುತ್ತಿರುತ್ತೇವೆ . ದೆಹಲಿಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮಧ್ಯವಯಸ್ಕ ಮಹಿಳೆ ಮತ್ತು ಮಾಡರ್ನ್ ಹುಡುಗಿಯರ ಮಧ್ಯೆ ವಾಗ್ವಾದ ನಡೆದಿರುವುದನ್ನು ಕಾಣಬಹುದು. ಸಣ್ಣ ವಸ್ತ್ರ ಧರಿಸಿದ ಯುವತಿಯರನ್ನು ರೇಪ್ ಮಾಡಬೇಕೆಂದು ಆ ಮಹಿಳೆ ಹೇಳಿದ್ದಾಳೆ ಎಂದು ಆರೋಪಿಸಲಾಗಿದ್ದು, ಆ ಮಹಿಳೆ ವಿಡಿಯೋದಲ್ಲಿ ತಮ್ಮ ಮಕ್ಕಳನ್ನು ಬಿಕಿನಿ ಧರಿಸುವುದರಿಂದ ತಡೆಯಿರಿ, ಸರಿಯಾಗಿ ಮಾತನಾಡಲು ಕಲಿಸಿ ಎಂದು ಹೇಳುತ್ತಿರುವುದನ್ನು ವಿಡಿಯೋ ಚಿತ್ರೀಕರಿಸಲಾಗಿದೆ. ಶಿವಾನಿ ಗುಪ್ತ ಎಂಬವರು ಈ ವಿಡಿಯೋ ಶೇರ್ ಮಾಡಿದ್ದು, ನಾವು ಸಣ್ಣ ಬಟ್ಟೆ ಧರಿಸಿದ್ದಕ್ಕಾಗಿ ಆ ಮಹಿಳೆ ಹಾಗೆ ಅಭಿಪ್ರಾಯ ಪಟ್ಟಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

 

Leave a Reply