ಕುಮಟಾ: ಇಲ್ಲಿನ ಕಲಭಾಗದ ಕೊಲಬಾ ವಿಠೋಬಾ ಶಾನಭಾಗ ಕಲಭಾಗಕರ್ (ಸಿ.ವಿ.ಎಸ್.ಕೆ) ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗಾಂಜಲಿ ಪರಮೇಶ್ವರ ನಾಯ್ಕ ಎಸೆಸೆಲ್ಸಿ ಪರೀಕ್ಷೆಯಲ್ಲಿ 625-625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ತಾಲೂಕಿನ ಕಾಗಾಲ ಪಂಚಾಯಿತಿಯ ಗ್ರಾಮದ ಗ್ರಾಮದ ನಿವಾಸಿ ನಿವೃತ್ತ ಬಿಎಸ್ಎಫ್ ಯೋಧ ಹಾಗೂ ಹಾಲಿ ಪ್ರಯಾಣಿಕರ ಟೆಂಪೊ ಮಾಲಿಕರಾಗಿರುವ ಪರಮೇಶ್ವರ ಹಾಗೂ ಚೇತನಾ ನಾಯ್ಕ ದಂಪತಿಗಳ ಪುತ್ರಿಯಾದ ನಾಗಾಂಜಲಿ ಪ್ರಾಥಮಿಕ ಶಿಕ್ಷಣವನ್ನು ಕುಮಟಾದ ಐಡಿಯಲ್ ಶಾಲೆ ಹಾಗೂ ಆದಿಚುಂಚನಗಿರಿ ಸೆಂಟ್ರಲ್ ಸ್ಕೂಲ್‌ನಲ್ಲಿ ಮುಗಿಸಿ ಪ್ರೌಢ ಶಿಕ್ಷಣಕ್ಕಾಗಿ ಸಿ.ವಿ.ಎಸ್.ಕೆ. ಪ್ರೌಢಶಾಲೆಯಲ್ಲಿ ಮುಗಿಸಿದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ.

ನಾನು Rank ನಿರೀಕ್ಷಿಸಿದ್ದೆ ಈ Rank ರಾಜ್ಯಕ್ಕೆ ಪ್ರಥಮ ಎಂಬುದು ಗೊತ್ತಾದ ಮೇಲೆ ತುಂಬಾ ಸಂತೋಷಗೊಂಡಿದ್ದಲ್ಲದೆ, Rank ಬರುವಂತೆ ನನ್ನನ್ನು ಹರಸಿದ್ದ ನನ್ನ ಅಜ್ಜ ಮಂಜು ನಾಯ್ಕ ಅವರ ಆಸೆಯನ್ನು ಈ Rank ಮೂಲಕ ಈಡೇರಿಸಿದ್ದೇನೆ ಎಂದು ಸಂತೃಪ್ತಿ ತಂದಿದೆ ಎಂದು ನಾಗಾಂಜಲಿ ಹೇಳಿದ್ದಾರೆ.

ನಾನು Rank ಗಳಿಸಬೇಕು ಎಂಬ ಛಲದಿಂದ ಸತತ ಅಭ್ಯಾಸ ಮಾಡುತ್ತಿದೆ. ನನ್ನ ಓದಿಗೆ ಏನು ಅಗತ್ಯವೋ ಅದೆಲ್ಲವನ್ನೂ ನಮ್ಮ ಹೆತ್ತವರು ಪೂರೈಸುತ್ತಿದ್ದರು. ಜೊತೆಗೆ ನನ್ನ ಶಾಲೆಯ ಮುಖ್ಯಾಧ್ಯಾಪಕ ಸುಮಾ ಪ್ರಭು ಹಾಗೂ ಶಿಕ್ಷಕ ಸಿಬ್ಬಂದಿ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು.

ಜೊತೆಗೆ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತೆಗೆದುಕೊಳ್ಳುತ್ತಿದ್ದ ಎಕ್ಸ್ಟ್ರಾ ಕ್ಲಾಸ್‌ಗಳು ನನ್ನ ಈ ಸಾಧನೆಗೆ ತುಂಬಾ ಅನುಕೂಲವಾದವು ಎನ್ನುತ್ತಾಳೆ ನಾಗಾಂಜಲಿ, ವೈದ್ಯೆಯಾಗುವ ಕನಸು ಈ ನನ್ನ ಸಾಧನೆಗೆ ಕಾರಣರಾದ ಪಾಲಕರು, ನನ್ನ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರಿಗೆ ನಾನು ಕೃತಜ್ಞಳಾಗಿದ್ದೇನೆ ಎನ್ನುವ ನಾಗಾಂಜಲಿ, ಅವಳಿಗೆ ಅನಾರೋಗ್ಯದಿಂದ ಬಳಲುವ ಬಡವರಿಗೆ ಸಹಾಯ ಮಾಡುವುದಕ್ಕಾಗಿ ವೈದ್ಯೆಯಾಗುವ ಆಸೆ ಹೋಂದಿರುವೆ ಎಂದಳು.

Leave a Reply