ಸಾಕೋ: ಪಿಜ್ಜಾ ಹಿಟ್ಟಿನಲ್ಲಿ ರೇಜರ್ ಬ್ಲೇಡ್‌ಗಳನ್ನು ಹಾಕುತ್ತಿದ್ದ ಶಂಕಿತ ವ್ಯಕ್ತಿಯನ್ನು ಅಮೇರಿಕಾದ ಸೂಪರ್ ಮಾರ್ಕೆಟ್ ನಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಕ್ಟೋಬರ್ 5 ರಂದು ಖರೀದಿಸಿದ ಪೋರ್ಟ್ಲ್ಯಾಂಡ್ ಪೈ ಬ್ರಾಂಡ್ ಪಿಜ್ಜಾ ಹಿಟ್ಟಿನಲ್ಲಿ ಗ್ರಾಹಕನೊಬ್ಬ ರೇಜರ್ ಬ್ಲೆಡ್ ಗಳನ್ನೂ ಕಂಡು ಕೊಂಡಿದ್ದನು. ಪೋರ್ಟ್ಲ್ಯಾಂಡ್ ಪೈ-ಬ್ರಾಂಡ್ ಉತ್ಪನ್ನಗಳನ್ನು ಇಟ್ ವಿಲ್ ಬಿ ಪಿಜ್ಜಾ ಪೂರೈಸುತ್ತದೆ. ಶಂಕಿತ ಬಂಧಿತ ವ್ಯಕ್ತಿ ಈ ಕಂಪೆನಿಯ ಮಾಜಿ ಉದ್ಯೋಗಿಯಾಗಿದ್ದು, ಪ್ರಕರಣವನ್ನುದಾಖಲಿಸಿ ತನಿಖೆ ನೆಡೆಸುತ್ತಿದ್ದಾರೆ.

ಕಂಪೆನಿಯು ನ್ಯೂಯಾರ್ಕ್, ಮ್ಯಾಸಚೂಸೆಟ್ಸ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್ ಮತ್ತು ಮೈನೆಗಳಲ್ಲಿನ 184 ಮಳಿಗೆಗಳಲ್ಲಿ ಆಗಸ್ಟ್ 1 ಮತ್ತು ಅಕ್ಟೋಬರ್ 11 ರ ನಡುವೆ ಮಾರಾಟವಾದ ಎಲ್ಲಾ ಹಿಟ್ಟು ಮತ್ತು ಚೀಸ್ ಉತ್ಪನ್ನಗಳನು ವಾಪಸು ಪಡೆದಿದೆ.

ನ್ಯೂ ಹ್ಯಾಂಪ್‌ಶೈರ್‌ನ ಡೋವರ್‌ನಲ್ಲಿರುವ ಸ್ಟ್ರಾಫೋರ್ಡ್ ಕೌಂಟಿ ಜೈಲಿನಲ್ಲಿ ನ್ಯಾಯಾಂಗ ಆರೋಪದಿಂದ ಪರಾರಿಯಾಗಿದ್ದ ಡೋವರ್‌ನ ನಿಕೋಲಸ್ ಆರ್. ಮಿಚೆಲ್ (38) ಎಂಬಾತ ಸೋಮವಾರ ಬಂಧನಕ್ಕೊಳಗಾಗಿದ್ದಾನೆ. ಆತ ಹೀಗೆ ಏಕೆ ಮಾಡಿರಬೇಕೆಂಬುದು ಇನ್ನೂ ಬಹಿರಂಗವಾಗಿಲ್ಲ.

Leave a Reply