ಮುರೈನ: ಮಧ್ಯಪ್ರದೇಶದಲ್ಲಿ ವಿರಹ ವೇದನೆಯಿಂದ ನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಮಾಡಿಕೊಂಡಿದ್ದಾನೆ. ಪತ್ನಿಯನ್ನು ತೊರೆದು ಹೋಗುವವರು ಹೆಚ್ಚಿರುವ ಈ ಕಾಲದಲ್ಲಿ ಮಧ್ಯಪ್ರದೇಶದ ಮುರೈನ ಜಿಲ್ಲೆಯ ಯುವಕ ರಾಮ್‍ನಿವಾಸ್ ಜಾಠವ್ ಪತ್ನಿ ತನ್ನ ತವರು ಮನೆಯಿಂದ ಬರಲಿಲ್ಲ ಎಂಬ ನಿರಾಶೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಆತನೊಂದಿಗೆ ಜಗಳ ಮಾಡಿ ಮುನಿಸಿಕೊಂಡ ಪತ್ನಿ ತವರು ಮನೆಗೆ ಹೋಗಿದ್ದಳು.

ಯುವಕ ಮತ್ತು ಅವರ ಕುಟುಂಬದವರು ಎಷ್ಟೇ ಕರೆದರೂ ಆತನ ಪತ್ನಿ ಪತಿಗೃಹಕ್ಕೆ ಮರಳಲು ಸುತರಾಂ ಸಿದ್ಧಳಾಗಲಿಲ್ಲ. ಪತ್ನಿಯ ಹಟದ ಮುಂದೆ ವಿಫಲನಾದ ಮುರೈನ ಪ್ರೇಮ್ ನಗರದ ನಿವಾಸಿ ರಾಮ್‍ನಿವಾಸ್ ಜಾಠವ್ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply