ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ಪತಿರಾಯ ಜಗಳ ಮಾಡಿ ಕೋಪಗೊಂಡು ತನ್ನನ್ನು ಶಾಂತಗೊಳಿಸಲು ನೂರಾರು ಕಿಲೋಮೀಟರ್ ನಡೆದ ಪ್ರಸಂಗ ವರದಿಯಾಗಿದೆ. ಈ ವ್ಯಕ್ತಿ ಕಾಲ್ನಡಿಗೆಯಲ್ಲಿ 450 ಕಿ.ಮೀ. ಕ್ರಮಸಿದ್ದಾರೆ.

ಇಂಡಿಪೆಂಡೆಂಟ್ ವರದಿಯ ಪ್ರಕಾರ, ಈ ಘಟನೆ ಇಟಲಿಯ ಕೋಮಾ ನಗರದಲ್ಲಿ ನಡೆದಿದ್ದು, ಈ ನಗರವು ಸ್ವಿಟ್ಜರ್ಲೆಂಡ್ ಗಡಿಯ ಸಮೀಪದಲ್ಲಿದೆ. 48 ವರ್ಷದ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದನು ಬಳಿಕ ನಡೆಯಲು ತೊಡಗಿದ. ಈ ವ್ಯಕ್ತಿ ಆಡ್ರಿಯಾಟಿಕ್ ಕರಾವಳಿಯನ್ನು ತಲುಪಿದಾಗ, ಆತನನ್ನು ಪೊಲೀಸರು ಆತನನ್ನು ವಶಕ್ಕೆ ಪಡೆದರು.

hb

ಒಂದೇ ದಿನದಲ್ಲಿ ಸುಮಾರು 64 ಕಿ.ಮೀ. ನಡೆದಿದ್ದಾರೆ. ಅಪರಿಚಿರು ದಾರಿಯಲ್ಲಿ ಅವರಿಗೆ ಆಹಾರವನ್ನು ನೀಡಿದರು ಎಂದು ಅವರು ಹೇಳಿದರು. ಪೊಲೀಸರು ತನಿಖೆ ಮಾಡಿದ ನಂತರ, ಅವರ ಪತ್ನಿ ಒಂದು ವಾರದ ಹಿಂದೆಯೇ ಕಾಣೆಯಾದ ವರದಿಯನ್ನು ಸಲ್ಲಿಸಿರುವುದು ತಿಳಿದು ಬಂದಿದೆ.

Leave a Reply