ನವಜಾತ ಶಿಶುವಾಗಿದ್ದಾಗ ಏರ್ಪೋರ್ಟ್ ನಲ್ಲಿ ಬಿಟ್ಟು ಹೋಗಿದ್ದ ಹೆತ್ತವರನ್ನು 33 ವರ್ಷಗಳ ಬಳಿಕ ವ್ಯಕ್ತಿಯೊಬ್ಬರು ಪತ್ತೆ ಹಚ್ಚಿದ ಬಗ್ಗೆ ವರದಿಯಾಗಿದೆ.
ಲಂಡನ್ ನ ಗೇಟ್ ವಿಕ್ ಏರ್ಪೋರ್ಟ್ ನ ಟಾಯ್ಲೆಟ್ ನಲ್ಲಿ ನವಜಾತ ಶಿಶುವಾಗಿದ್ದಾಗ ತಂದೆ ತಾಯಿಗಳಿಂದಲೇ ತ್ಯಜಿಸಲ್ಪಟ್ಟಿದ್ದ ಸ್ಟೀವ್ ಹಾಯಿಡ್ಸ್ 33 ವರ್ಷಗಳ ಬಳಿಕ ಜೆನೆಟಿಕ್ ಜಿನಿಯಲಾಜಿಸ್ಟ್ ರ ಸಹಾಯದಿಂದ ಅವರನ್ನು ಕಂಡುಹಿಡಿದಿದ್ದಾನೆ.
1986 ರಲ್ಲಿ ಏರ್ಪೋರ್ಟ್ ನ ಸಿಬ್ಬಂದಿ ಯೋರ್ವರಿಗೆ ಕೇವಲ ಹತ್ತು ದಿನಗಳ ಸ್ಟೀವ್ ಟಾಯ್ಲೆಟ್ ನಲ್ಲಿ ಸಿಕ್ಕಿದ್ದನು. “ನನ್ನ ತಾಯಿ ಈಗ ಜೀವಂತವಾಗಿ ಇಲ್ಲದಿರುವುದರಿಂದ ಅವರು ಹಾಗೇಕೆ ಮಾಡಿದ್ದರು ಎಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ”ಎಂಬುದಾಗಿ ಸ್ಟೀವ್ ಬರೆದಿದ್ದಾರೆ.

 

Leave a Reply