ನ್ಯೂಜೆರ್ಸಿ: ಜಗತ್ತಿನಾದ್ಯಂತ ಕೆಮಿಕಲೀಕರಣ, ವಾತಾವರಣ ಮಲಿನತೆ ಹಾಗೂ ಆಧುನಿಕ ಲೈಫ್ ಸ್ಟೈಲ್‍ನ ಕೆಟ್ಟ ಪ್ರಭಾವ ಅತಿಹೆಚ್ಚು ಪುರುಷರ ಮೇಲಾಗುತ್ತಿದ್ದು ಅವರ ಪ್ರಜನನ ಸಾಮರ್ಥ್ಯಕ್ಕೆ ತೀವ್ರ ಹಾನಿ ಮಾಡುತ್ತಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ತಜ್ಞರು ಪುರುಷ ಫರ್ಟಿಲಿಟಿ ಅಥವಾ ಪುರುಷರ ಪ್ರಜನನ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ನಿರಂತರ ಕುಸಿತಗೊಳ್ಳುತ್ತಿದೆ ಎನ್ನುವ ಗಂಭೀರ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕ ಮತ್ತು ಯುರೋಪಿನ ಫರ್ಟಿಲಿಟಿ ಕ್ಲಿನಿಕ್‍ಗೆ ಬರುವವರಲ್ಲಿ ಸುಮಾರು 1 ಲಕ್ಷ 24 ಸಾವಿರ ಪುರುಷರಲ್ಲಿ ನಡೆಸಲಾದ ಅಧ್ಯಯನದಲ್ಲಿ ಈ ವಿವರ ಬಟಾ ಬಯಲಾಗಿದೆ.

ಅಧ್ಯಯನದ ಪ್ರಕಾರ ಪುರುಷರ ಸ್ಪರ್ಮ್‍ಕ್ವಾಲಿಟಿಯಲ್ಲಿ(ವೀರ್ಯದ ಗುಣಮಟ್ಟ) ಪ್ರತಿವರ್ಷ ಶೇ.2ರಷ್ಟು ಇಳಿಕೆಯಾಗುತ್ತಿದೆ. ಜೊತೆಗೆ ಇನ್ನೊಂದು ಅಧ್ಯಯನದಲ್ಲಿ 2600 ಸ್ಪರ್ಮ್ ಡೋನರ್‍ಗಳಲ್ಲಿ ಪುರುಷರಲ್ಲಿ ಫರ್ಟಿಲಿಟಿ ಸಾಧಾರಣಕ್ಕಿಂತ ಸ್ವಲ್ಪ ಹೆಚ್ಚೇ ಇತ್ತು. ಆದರೆ ಹೆಚ್ಚಿನ ಪುರುಷರ ಮಕ್ಕಳಿಗೆ ಈಗಲೂ ಜನ್ಮ ನೀಡಲು ಸಮರ್ಥರಿದ್ದಾರೆ. ಒಂದುವೇಳೆ ಇದೇ ಟ್ರೆಂಡ್ ಜಾರಿಯಲ್ಲಿದ್ದರೆ ಸ್ಪರ್ಮ್(ವೀರ್ಯದ ಗುಣಮಟ್ಟದಲ್ಲಿ) ಕ್ವಾಲಿಟಿಯಲ್ಲಿ ನಿರಂತರ ಕುಸಿತ ನಡೆಯುತ್ತ ಹೋಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಮನುಷ್ಯನ ಅಸ್ತಿತ್ವ ಅಪಾಯದಲ್ಲಿದೆ ಎಂದುವಿಜ್ಞಾನಿಗಳ ಅಭಿಪ್ರಾಯವಾಗಿದ್ದು, ಕಳೆದ ವರ್ಷ 1017ರಲ್ಲಿಇಂತಹದೇ ಅಧ್ಯಯನ ನಡೆಸಲಾಗಿತ್ತು. ಪಾಶ್ಚಾತ್ಯ ದೇಶಗಳಲ್ಲಿ 1973ರಿಂದ 2011ರವರೆಗೆಕ್ವಾಲಿಟಿ ಮತ್ತು ಕ್ವಾಂಟಿಟಿಯಲ್ಲಿಶೇ. 59ರಷ್ಟು ಕುಸಿತ ಆಗಿದೆ.

ವಾತಾವರಣದಲ್ಲಿನ ಪೊಸ್ಟಿಸೈಡ್ಸ್,, ಹಾರ್ಮೋನ್‍ಗಳಿಗೆ ತೊಂದರೆಯೊಡ್ಡುವ ಕೆಮಿಕಲ್ಸ್, ಒತ್ತಡ, ಧೂಮಪಾನ ಮತ್ತು ಬೊಜ್ಜು ಸ್ಪರ್ಮ್ ಕ್ವಾಲಿಟಿಯನ್ನು ಮತ್ತು ಕ್ವಾಂಟಿಟಿಯನ್ನು ಕುಸಿತಕ್ಕೊಳಡಪಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಟೆಸ್ಟಿಕ್ಯೂಲರ್ ಕ್ಯಾನ್ಸರ್ ಸಂಖ್ಯೆಯಲ್ಲಿಯೂ ನಿರಂತರ ಹೆಚ್ಚಳವಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಮೆರಿಕದ ನ್ಯೂಜೆರ್ಸಿ ಮತು ಸ್ಪೇನ್‍ನವೆಲೆನ್ಸಿಯದ ವಿಜ್ಞಾನಿಗಳು ಮೊದಲ ಬಾರಿ ಲಾರ್ಜ್ ಸ್ಕೇಲ್ ಸ್ಟಡಿ ಮಾಡಿದ್ದು, ಇದರಲ್ಲಿ ಸ್ವಿಮಿಂಗ್ ಸ್ಪರ್ಮ್ ಆಥವಾ ಚಲನಶೀಲ ಸ್ಪರ್ಮ್ ಸಂಖ್ಯೆಯು ಪುರುಷರಲ್ಲಿ ಬೇರೆ. ಬೇರೆ ಮೂರು ಗುಂಪುಗಳಲ್ಲಿ ಹಂಚಲಾಗಿತ್ತು. ಲೋಸ್ಪರ್ಮ್‍ಕೌಂಟ್, ಮೀಡಿಯಂ ಸ್ಪರ್ಮ್ ಕೌಂಟ್ ಮತುತ ಹೈಸ್ಪರ್ಮ್ ಕೌಂಟ್. ಇದರಲ್ಲಿ ಹೈಸ್ಪರ್ಮ್ ಕೌಂಟ್ ಗುಂಪಿನ ಪುರುಷರಲ್ಲಿ ಚಲನಾಶೀಲ ಸ್ಪರ್ಮ್(ವೀರ್ಯಗಳ) ಸಂಖ್ಯೆ ಪ್ರತಿವರ್ಷ 1.8 ಶೇಕಡ ಕುಸಿತ ಕಂಡು ಬಂದಿದೆ. ಡಾ. ಜೇಮ್ಸ್ ಹೊಟೈಲಿಂಗ್ ರು” ಮುಂದಿನ ಸಮಯದಲ್ಲಿ ಪುರುಷರಿಗೆ ಮಕ್ಕಳಾಗುವ ಸಾಮರ್ಥ್ಯದಲ್ಲಿ ಕುಸಿತವಾಗುವುದು ನಿಶ್ಚಿತ, ಇದೊಂದು ಚಿಂತಾಜನಕ ಸ್ಥಿತಿಯಾಗಿದೆ ಎಂದು ಹೇಳಿದ್ದಾರೆ.

Leave a Reply