ಮಹಾರಾಷ್ಟ್ರ : ಬ್ಯಾಚುಲರ್ ಆಫ್ ಹೋಮಿಯೋಪತಿ ಕಲಿಯುತ್ತಿದ್ದ ವಿದ್ಯಾರ್ಥಿ ತಾನು ಪ್ರಥಮ ವರ್ಷ ಫೇಲ್ ಆಗಲು ತನ್ನ ಗರ್ಲ್ ಫ್ರೆಂಡ್ ಕಾರಣ ಎಂದು ದೂಷಿಸಿದ್ದಾನೆ. ಮಾತ್ರವಲ್ಲ, ಆಕೆ ನನ್ನ ಕಲಿಕೆಯ ವೇಳೆ ನನ್ನ ಏಕಾಗ್ರತೆಗೆ ಭಂಗ ತಂದಿದ್ದು, ತಾನು ಕಟ್ಟಿದ ಫೀಸ್ ನ ಮೊತ್ತ ತನಗೆ ಪರಿಹಾರವಾಗಿ ಕೊಡಬೇಕೆಂದು ಪೊಲೀಸರಿಗೆ ದೂರು ಕೊಟ್ಟಿದ್ದಾನೆ.
ಬೀಡ್ ಜಿಲ್ಲೆಯಿಂದ ಬಂದ ವಿದ್ಯಾರ್ಥಿ, ಕಳೆದ ವರ್ಷ ಬಿಎಚ್ಎಂಎಸ್ ಕೋರ್ಸ್ಗೆ ಔರಂಗಬಾದ್ನ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾನೆ. ಅವನ ಗರ್ಲ್ ಫ್ರೆಂಡ್ ಅವನ ಕ್ಲಾಸ್ ಮೇಟ್.

ಪ್ರಥಮ ವರ್ಷ ಫೇಲ್ ಆದ ಕಾರಣ ಆತನಿಗೆ ಮುಂದಿನ ವರ್ಷ ಕಲಿಕೆ ಮುಂದುವರೆಸಲು ಸಾಧ್ಯವಿಲ್ಲ. ಎರಡನೇ ವರ್ಷಕ್ಕೆ ಆತನಿಗೆ ಪ್ರವೇಶ ನಿರಾಕರಿಸಲಾಗಿದೆ.
ತಾನು ಫೇಲ್ ಆದ ಬಳಿಕ ಆಕೆ ತನ್ನಲ್ಲಿ ಮಾತು ಕತೆ ನಿಲ್ಲಿಸಿದ್ದು, ಫೋನ್ ಕೂಡ ರಿಸೀವ್ ಮಾಡುತ್ತಿಲ್ಲ. ಇದರಿಂದ ಕುಪಿತಗೊಂಡ ವಿದ್ಯಾರ್ಥಿ ಆಕೆಯ ತಂದೆ ಮತ್ತು ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ಬರೆದಿದ್ದಾನೆ. ಹಾಗೂ ಆಕೆಯ ಫೋಟೋ ಸೋಶಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.

Leave a Reply