ಉತ್ತರ ಪ್ರದೇಶ(ಮೀರಟ್): ಮಕ್ಕಳಿಗೆ ಅಷ್ಲೀಲ ವಿಡಿಯೋ ತೋರಿಸಿ ತನ್ನ ಕಾಮ ತೃಷೆ ತೀರಿಸಿಕೊಳ್ಳುತ್ತಿದ್ದ ನಿವೃತ್ತ ಅಧಿಕಾರಿಯ ಕರ್ಮಕಾಂಡ ಬೆಳಕಿಗೆ ಬಂದಿದೆ. ತನ್ನ ಕೆಲಸದಾಕೆಯ ಸಹಕಾರದಿಂದ ಮಕ್ಕಳನ್ನು ತರಿಸುತ್ತಿದ್ದು, ನಂತರ ಲ್ಯಾಪ್ ಟಾಪ್ ಮತ್ತು ಮೊಬೈಲ್ ನಲ್ಲಿ ಅಷ್ಲೀಲ ವಿಡಿಯೋ ತೋರಿಸಿ ಮಕ್ಕಳ ಜೊತೆ ರಾಕ್ಷಸೀಯತೆ ಮೆರೆಯುತ್ತಿದ್ದ ಎಂದು ವರದಿಯಾಗಿದೆ. ಆತನ ಭಯಾನಕ ಮುಖ ಬೆಳಕಿಗೆ ಬಂದ ಬಾಲಕಿಯರು ಆತನ ಎಲ್ಲ ಕುಕೃತ್ಯವನ್ನು ಬಿಚ್ಚಿಟ್ಟಿದ್ದಾರೆ.

ದೀಪಾವಳಿ ಬಳಿಕ ತನ್ನ ಮೆನೆಗೆ ಸಿಸಿ ಕ್ಯಾಮರಾ ಅಳವಡಿಸಿದ ವಿಮಲ್ ಚಂದ್, ಅದೇ ಸಿಸಿ ಕೆಮರಾದ ಕಾರಣದಿಂದ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರ ಪ್ರಕಾರ, ವಿಮಲ್ ಚಂದ್ ಚಂದ್ ಅವರ ಪತ್ನಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದು, ಮನೆಯಲ್ಲಿ ಆತ ಮತ್ತು ಕೆಲಸದಾಕೆ ಮನೆ ಕೆಲಸ ಮಾಡುತ್ತಿದ್ದಳು. ಆದರೆ ಆಕೆ ಪುಟ್ಟ ಮಕ್ಕಳನ್ನು ಪುಸಲಾಯಿಸಿ ತಂದು ಈತನಿಗೊಪ್ಪಿಸಿ ಮತ್ತೆ ಆತನ ಜೊತೆ ಸೇರಿ ಮಕ್ಕಳೊಂದಿಗೆ ಸೆಕ್ಸ್ ಕ್ರಿಯೆ ನಡೆಸುತ್ತಿದ್ದಳು. ಬಳಿಕ ಮಕ್ಕಳಿಗೆ ಹಣ ಕೊಟ್ಟು ಬೆದರಿಕೆ ಹಾಕಿ ಬಾಯಿ ಮುಚ್ಚಿಸುತ್ತಿದ್ದ.

Leave a Reply