ಅನಿಯಂತ್ರಿತ ಮೂತ್ರ ವಿಸರ್ಜನೆ. ಹತ್ತನೇ ಕ್ಲಾಸಿನ ಹುಡುಗಿಯೊಬ್ಬಳು ರಾತ್ರಿ ಹೊತ್ತು ಮಲಗಿದಾಗ ಮೂತ್ರ ಮಾಡಿಕೊಳ್ಳುತ್ತೇನೆ ಇದರಿಂದ ಮನಸ್ಸಿಗೆ ಬಹಳ ಖಿನ್ನಳಾಗಿದ್ದೆನೆ.ಬೇರೆ ಬೇರೆ ಪದ್ಧತಿಯ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಆದರೂ ನಿಲ್ಲುತ್ತಿಲ್ಲ ಏನು ಮಾಡುವುದು ಎಂದು fb ಮೆಸೆಂಜರ್ಗೆ ತನ್ನ ತಂದೆಯ fb ಪೇಜ್ ನಿಂದ ನನಗೆ ಮೆಸೇಜ್ ಮಾಡಿದಳು.

ಸುಮಾರು ಒಂದು ತಿಂಗಳ ಹಿಂದೆ ಅದೇ ದಿನ ಹಾರಾಡಿಯ ನಮ್ಮ ಸಂಸ್ಥೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾನು ಹೊರರೋಗಿ ವಿಭಾಗದಲ್ಲಿ ಲಭ್ಯವಿದ್ದುದರಿಂದ ಅವಳ ಮನೆಯ ಹತ್ತಿರವೇ ಇದು ಇರುವುದರಿಂದ ಅಲ್ಲೇ ಬಂದು ನನ್ನನ್ನು ಭೇಟಿಯಾಗಲು ಹೇಳಿದೆ  ತಂದೆಯೊಡನೆ ಬಂದಳು.

ಅನಿಯಂತ್ರಿತ ಮೂತ್ರ ವಿಸರ್ಜನೆ ನಾಲ್ಕನೇ ತರಗತಿಯವರೆಗೆ ಶೇ ಹತ್ತು ಮಕ್ಕಳಲ್ಲಿ ಇರುತ್ತೆ ಅಂತ ಹೇಳ್ತಾರೆ ..ಹತ್ತನೇ ತರಗತಿಯವರೆಗೆ ಸಾಧಾರಣ ಮೂರು ರಿಂದ ನಾಲ್ಕು ಮಕ್ಕಳಿಗೆ ಇರುತ್ತೆ ಅಂತ ಹೇಳ್ತಾರೆ ..ಪ್ರಮುಖ ಕಾರಣಗಳಲ್ಲಿ ಮೊದಲನೆಯದಾಗಿ ಇಂತಹ ಮಕ್ಕಳ ಮೂತ್ರಕೋಶ ಸಣ್ಣ ಗಾತ್ರದಾಗಿರುತ್ತದೆ.ಎರಡನೆಯದಾಗಿ ಕೆಲವು ಮಕ್ಕಳು ಅವರ ಮನೆಯಲ್ಲಿ ಇನ್ನೊಂದು ಸಣ್ಣ ಮಗುವಿನ ಜನನವಾದರೆ ಅಂತಹ ಸಮಯದಲ್ಲಿ ದೊಡ್ಡವರ ಗಮನವನ್ನು ಸೆಳೆಯಲು ,ತಾವು ಮೂತ್ರ ಮಾಡಿಕೊಂಡು ಆ ಸಣ್ಣ ಮಗುವಿನಂತೆ ತಮಗೂ ಸಮಸ್ಯೆಗಳಾಗುತ್ತವೆ ಎಂದು ತೋರಿಸುತ್ತವಂತೆ .ಕೆಲವೊಮ್ಮೆ ಮಕ್ಕಳಲ್ಲಿ ಅಸುರಕ್ಷತೆಯ ಭಾವನೆಗಳು ಉದಾಹರಣೆಗೆ ತಾಯಿ ತಂದೆಯರ ಜಗಳ ,ಶಾಲೆಯಲ್ಲಿ ದಂಡನೆ ,ಮನೆಯಲ್ಲಿ ಬೈದು ಮಾನಸಿಕವಾಗಿ ಶೋಷಿಸುವ ಸಂಬಂಧಿಕರು ,ಅಥವಾ ಹೊರಗೆ ಲೈಂಗಿಕ ಶೋಷಣೆ ಮುಂತಾದ ಕಾರಣಗಳು ಇದ್ದರೆ ಅದನ್ನು ಪ್ರಕಟಿಸಲಾಗದೆ ಈ ರೀತಿಯ ಸಮಸ್ಯೆಗಳು ಉಂಟಾಗಬಹುದು .

ಇಂತಹ ಮಕ್ಕಳಿಗೆ ಮೊದಲು ನಾವು ಮಲಗುವಾಗ ಏನು ಮಾಡಬೇಕು ಎಂಬ ಕೆಲವು ವಿಶಿಷ್ಟ ಸಲಹೆಗಳನ್ನು ಕೊಡುತ್ತೇವೆ ..sleep hygeine ಎಂದು ಇಂಗ್ಲಿಷಿನಲ್ಲಿ ಇದನ್ನು ಕರೆಯುತ್ತಾರೆ ..ಸಂಜೆ ಆರು ಗಂಟೆಯ ನಂತರ ನೀರು ,ಹಾಲು ,ಮಜ್ಜಿಗೆ ಇಂತಹ ದ್ರವ್ಯ ಪದಾರ್ಥಗಳನ್ನು ಅನಿಯಂತ್ರಿತ ಮೂತ್ರ ವಿಸರ್ಜನೆ ಸಮಸ್ಯೆ ಇರುವ ಮಕ್ಕಳು ಸೇವಿಸಲೇಬಾರದು. ಎರಡನೆಯದಾಗಿ ಮಲಗಿ ಎರಡು ಗಂಟೆಗಳ ನಂತರ ತಾಯಿ ತಂದೆಯರು ಯಾರಾದರೂ ಒಬ್ಬರು ಮಗುವನ್ನು ಎಬ್ಬಿಸಿ ಮೂತ್ರ ಮಾಡಿಸಬೇಕು ..ರಜೆಯ ದಿನಗಳಲ್ಲಿ ಮಕ್ಕಳು ಮನೆಯಲ್ಲಿರುವಾಗ ಅತೀ ಅಗತ್ಯ ಅನ್ನುವವರೆಗೆ ಮೂತ್ರ ಕಟ್ಟಿ ಹಿಡಿದುಕೊಳ್ಳಬೇಕು ಇದನ್ನು ನಾವು bladder stretching exercise ಅಂತ ಕರೆಯುತ್ತೇವೆ ಇದರಿಂದಾಗಿ ಸಣ್ಣ ಮೂತ್ರಕೋಶವಿರುವ ಮಕ್ಕಳ ಸಮಸ್ಯೆ ಕಡಿಮೆಯಾಗುತ್ತೆ ಅಂತ ವೈಜ್ಞಾನಿಕವಾಗಿ ತಿಳಿದುಬಂದಿದೆ .

ಐದನೇ ತರಗತಿಯವರೆಗೆ ಇರುವ ಮಕ್ಕಳಿಗೆ ನಡವಳಿಕೆ ಚಿಕಿತ್ಸೆಯ ಕೆಲವು techniques ರೂಪದಲ್ಲಿ ಪ್ರತಿದಿನ ಮೂತ್ರ ಮಾಡದೇ ಇರುವಾಗ ಕ್ಯಾಲೆಂಡರ್ ನಲ್ಲಿ ಒಂದು ನಕ್ಷತ್ರ ಹಾಕಲು ಹೇಳುತ್ತೇವೆ ..star chart..ಈ ಸ್ಟಾರ್ ಚಾರ್ಟ್ನಲ್ಲಿ ದಿನೇ ದಿನ ನಕ್ಷತ್ರಗಳು ಬಂದಾಗ ಆ ಮಗುವಿಗೆ ಮನಸ್ಸಿನಲ್ಲಿ ತಾನು ಆದಷ್ಟು ಮೇಲೆ ಹೇಳಿದ ವಿಷಯಗಳನ್ನು ಪರಿಪಾಲಿಸಿ ನಕ್ಷತ್ರವನ್ನು ಸಂಪಾದಿಸಬೇಕು ಎಂಬ ಒಂದು ದೃಢ ನಿರ್ಧಾರ ಬರುತ್ತದೆ ..ಹೆಚ್ಚಿನ ಮಕ್ಕಳಿಗೆ ಇದೇ ಸಾಕಾಗುತ್ತದೆ ..ಕೆಲವು ಮಕ್ಕಳಿಗೆ ಇದು ಸಾಲದೇ ಇದ್ದಾಗ ಮಾತ್ರ ಚಿಕಿತ್ಸೆ ಬೇಕಾಗುತ್ತದೆ ..imipramine..desmopressin..ಮುಂತಾದ ಮಾತ್ರೆಗಳನ್ನು ಪರಿಣಿತ ವೈದ್ಯರು ಸಲಹೆ ಮೇರೆಗೆ ತಾಯಿ ತಂದೆಯರು ಮಕ್ಕಳಿಗೆ ಕೊಡಬಹುದು ..ಮಾತ್ರೆಗಳ ಪರಿಣಾಮ ಅಡ್ಡ ಪರಿಣಾಮಗಳನ್ನು ನೋಡಿ ವೈದ್ಯರು ಮಾತ್ರೆಯ ಪ್ರಮಾಣವನ್ನು ನಿರ್ಧರಿಸುತ್ತಾರೆ ..ಇಷ್ಟೆಲ್ಲಾ ಬರೆಯಲು ಕಾರಣ ಈ ಮಗು ನನಗೆ ಇದೀಗ ಮೆಸೇಜ್ ಮಾಡಿತ್ತೂ”sir ,i am dry for last twenty days..and i feel proud of myself”.

ಡಾ. ಪಿ.ವಿ. ಭಂಡಾರಿ, ಮನೋರೋಗ ತಜ್ಞರು

Leave a Reply