ನವದೆಹಲಿ : ಶೀತಲ್ ರಾಜ್ ಮೌಂಟ್ ಎವರೆಸ್ಟ್ ಏರುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಉತ್ತರಾಖಂಡದ ಪಿತೋರ್ ಘರ್’ನ 23 ವರ್ಷದ ಈ ಘೋರಿ ಮೌಂಟ್ ಏವರೆಸ್ಟ್ ಏರಿ ಮನೆಮಾತಾಗಿದ್ದಾಳೆ. ಜೊತೆಗೆ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.  ಸಾಹಸಿ ಪ್ರವೃತ್ತಿಯ ಶೀತಲ್ ರಾಜ್‌ಗೆ – ಬಾಲ್ಯದಿಂದಲೂ ಏನಾದರೂ ಸಾಧನೆ ಮಾಡಬೇಕೆಂಬ ಬಯಕೆ. 2018 ರಲ್ಲಿ ತನ್ನ 22 ನೇ ವಯಸ್ಸಿನಲ್ಲಿ ವಿಶ್ವದ ಮೂರನೇ ಅತಿ ಎತ್ತರದ ಕಂಚನಜುಂಗಾ ಪರ್ವತವನ್ನು ಏರಿ ಸಾಧನೆಗೈದಿದ್ದಳು. ಈಗ ಮೌಂಟ್ ಎವರೆಸ್ಟ್ ಏರುವ ಮೂಲಕ ಅಪೂರ್ವ ಸಾಧನೆಗೈದು ವಿಶ್ವವಿಖ್ಯಾತಳಾಗಿದ್ದಾಳೆ. ವಿಶ್ವದ ಅತಿ ಎತ್ತರದ ಮೌಂಟ್ ಏವರೆಸ್ಟ್ ಏರಿ ನೂತನ ದಾಖಲೆ ನಿರ್ಮಿಸಿದ ಶೀತಲ್ ರಾಜ್ ಅವರನ್ನು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ತಮ್ಮ ಟ್ವಿಟರ್ ಪೇಜಿನಲ್ಲಿ ಅಭಿನಂಧಿಸಿದ್ದಾರೆ.

“ಇದೊಂದು ಹೆಮ್ಮೆಯ ಕ್ಷಣ. ಉತ್ತರಾಖಂಡದ ಪುತ್ರಿಯೊಬ್ಬಳು ಅತ್ಯಂತ ಕಿರಿಯ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಹಾಗೂ ಕಂಚನಜುಂಗಾ ಪರ್ವತವನ್ನು ಏರಿ ಅಪೂರ್ವ ಸಾಧನೆ ಮಾಡುವ ಮೂಲಕ ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾಳೆಂದು ತ್ರಿವೇಂದ್ರ ಸಿಂಗ್ ರಾವತ್‌ ಬಣ್ಣಿಸಿದ್ದಾರೆ. ” ಮೌಂಟ್ ಎವರೆಸ್ಟ್ ಕೇಳಿದ್ದೆ. ಅದನ್ನು ದೂರದರ್ಶನದಲ್ಲಿ ನೋಡಿದ್ದೆ ಎಂದು ವೃತ್ತಿಯಲ್ಲಿ ವಾಹನ ಚಾಲಕರಾಗಿರುವ ಶೀತಲ್ ರಾಜ್ ಅವರ ತಂದೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

Leave a Reply