ಮುಂಬೈಯಲ್ಲಿ ರ‌್ಯಾಲಿ ನಡೆಸಲು ನಿರಾಕರಿಸಿದ ಬೆನ್ನಲ್ಲೇ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಲಿತರ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಮತ್ತು ಮಹಾರಾಷ್ಟ್ರದ ಇತ್ತೀಚಿನ ಹಿಂಸಾಚಾರದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಹೇಳಿದ್ದಾರೆ.ಮೇವಾನಿ ಪ್ರಚೋದನಕಾರಿ ಭಾಷಣ ಮಾಡಿ ಕೋಮು ಸಾಮರಸ್ಯ ಕೆಡಿಸುತ್ತಿದ್ದಾರೆ
ಎಂದು ಆರೋಪಿಸಿ ಪುಣೆ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

“ಬಿಜೆಪಿ ನನ್ನ ಬಗ್ಗೆ ಹೆದರುತ್ತಿದೆ. ಗುಜರಾತ್ ಚುನಾವಣೆಯ ನಂತರ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಭಾಷಣದಲ್ಲಿ ಒಂದೇ ಒಂದು ಪ್ರಚೋದಕ ಪದ ಇಲ್ಲ” ಎಂದು ಮೇವಾನಿ ಹೇಳಿದ್ದಾರೆ.

ಮಹಾರಾಷ್ಟ್ರ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಮೇವಾನಿ, “ನಾವು ಜಾತಿ ರಹಿತ ಭಾರತವನ್ನು ಬಯಸುತ್ತೇವೆ. ಭೀಮಾ ಕೊರೆಗಾಂವ್ ನ 200 ನೇ ವಾರ್ಷಿಕೋತ್ಸವವನ್ನು ನೆನಪಿಸಲು ದಲಿತರಿಗೆ ಶಾಂತಿಯುತ ರಾಲಿಯನ್ನು ಮಾಡುವ ಹಕ್ಕಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Leave a Reply