ಮುಂಬೈ: ಉಗ್ರರೆಂದು ತಪ್ಪಾಗಿ ತಿಳಿದು ಇಬ್ಬರು ಚಿತ್ರ ನಟರನ್ನು ಪೊಲೀಸರು ಬಂಧಿಸಿದ ಘಟನೆ ಟ್ವಿಟರ್ ನಲ್ಲಿ ಹಾಸ್ಯಕ್ಕೀಡಾಗಿದೆ. ವಸಾಯ್ ಪ್ರದೇಶದಿಂದ ಬಂಧಿಸಿದ ಇಬ್ಬರು, ಸಿನೆಮಾ ಚಿತ್ರೀಕರಣಕ್ಕಾಗಿ ಈ ರೀತಿ ಉಗ್ರರ ಪೋಷಾಕಿನಲ್ಲಿದ್ದ ಸಿನೆಮಾ ನಟರು.

ನಿಜವಾಗಿ ಹೃತಿಕ್ ರೋಶನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ಚಿತ್ರದ ಸೆಟ್ ಪಕ್ಕದ ಪ್ರದೇಶದಲ್ಲಿ ಅತ್ತಿತ್ತ ತಿರುಗಾಡುತ್ತಾ ಸಿಗರೇಟ್ ಖರೀದಿಸುತ್ತಿರುವುದುನ್ನು ಗಮನಿಸಿದ ಸ್ಥಳೀಯರು ಭಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಲರಾಮ್ ಗಿನ್ಯಾಲ (23) ಹಾಗೂ ಅರ್ಬಾಯ್ ಖಾನ್ (20) ಎಂಬಿಬ್ಬರು ನಟರನ್ನು ಬಳಿಕ ಪೊಲೀಸರು ಹುಡುಕಿ ಬಂಧಿಸಿದ್ದರು. ಬಳಿಕ ಚಿತ್ರ ನಿರ್ಮಾಣ ಸರಿಯಾದ ಎಲ್ಲಾ ದಾಖಲೆಗಳನ್ನು ನೀಡಿ ಅವರ ಪರಿಚಯವನ್ನು ಮಾಡಿದರು. ಜನರಲ್ಲಿ ಆತಂಕ ಮೂಡಿಸಿದ್ದಕ್ಕಾಗಿ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 188 ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಲವು ಟ್ವಿಟರ್ ಪ್ರತಿಕ್ರಿಯೆಗಳನ್ನು ನೋಡಿ 

https://twitter.com/Gulati_Ka_Gyan/status/1133769698955354112

https://twitter.com/Smart_Ladka/status/1133787669559857153

Leave a Reply