ಕಷ್ಟದಲ್ಲಿರುವವರನ್ನು ಕಂಡರೆ ಸಹಾಯ ಮಾಡಲು ಪೊಲೀಸರು ಯಾವಾಗಲೂ ಮುಂದೆ ಬರುತ್ತಾರೆ. ಅಂತಹ ಪೊಲೀಸ್ ಅಧಿಕಾರಿಯ ಕೆಲಸ ಇಂಟರ್ನೆಟ್ ನಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಮುಂಬೈ ಟ್ರಾಫಿಕ್ ಪೋಲೀಸ್ ತನ್ನ ನಿಸ್ವಾರ್ಥ ಸೇವೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ಮುಂಬೈ ನಿವಾಸಿಯೊಬ್ಬರ ಬೈಕ್ ನ ಪೆಟ್ರೋಲ್ ಖಾಲಿಯಾಗಿದ್ದು, ಇದನ್ನು ನೋಡಿದ ಟ್ರಾಫಿಕ್ ಪೊಲೀಸ್ ಸೋಮನಾಥ್ ಕಾಕದ್ ಅವರಿಗೆ ತನ್ನ ಪೆಟ್ರೋಲ್ ನೀಡಿ ಸಹಕರಿಸಿ ಮಾನವೀಯತೆ ಮೆರೆದರು. ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ನ ಬಳಿ ಅವರ ಬೈಕು ಸ್ಥಗಿತಗೊಂಡಿತ್ತು, ಅಲ್ಲಿಂದ ಪೆಟ್ರೋಲ್ ಪಂಪ್ ಸುಮಾರು 6 ಕಿ.ಮೀ. ದೂರದಲ್ಲಿತ್ತು. ಅಲ್ಲಿಯವರೆಗೆ ಬೈಕ್ ಸವಾರ ದೂಡಿಕೊಂಡು ಹೋಗಬೇಕಿತ್ತು. ಆದರೆ ಸಮಯಕ್ಕೆ ಸರಿಯಾಗಿ ಪೆಟ್ರೋಲ್ ಹಂಚುವ ಮೂಲಕ ಟ್ರಾಫಿಕ್ ಪೊಲೀಸ್ ಅವರ ಸಮಸ್ಯೆಗೆ ಸ್ಪಂದಿಸಿದರು.

Leave a Reply