ಬೆಂಗಳೂರು: ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದ ನಟ ಪ್ರಕಾಶ್​ ರಾಜ್​ ಅವರಿಗೆ ತೀವ್ರ ನಿರಾಸೆಯಾಗಿದ್ದು, ಈ ಫಲಿತಾಂಶ ನನಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪ್ರಕಾಶ್​ ರಾಜ್​ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಫಲಿತಾಂಶದ ಕುರಿತಂತೆ ಪ್ರಕಾಶ್​ ರಾಜ್​, ‘ಈ ಫಲಿತಾಂಶ ನನ್ನ ಕಪಾಳಕ್ಕೆ ಜೋರಾಗಿ ಬಾರಿಸಿದಂತಾಗಿದೆ. ಅಸೂಯೆ.. ಟ್ರೋಲ್​ಗಳು ಮಾತ್ರ ನನ್ನ ದಾರಿಗೆ ಬಂದಿವೆ. ಆದ್ರೆ ನಾನು ನನ್ನ ಜಾಗದಲ್ಲೇ ನಿಲ್ಲುತ್ತೇನೆ. ಸೆಕ್ಯುಲರ್​ ಭಾರತಕ್ಕಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಮುಂದೆ ತೀವ್ರ ಕಠಿಣ ಪಯಣವಿದೆ, ಅದಕ್ಕೆ ಇದು ಪ್ರಾರಂಭ ಮಾತ್ರ. ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

Leave a Reply