ಪ್ರಸಕ್ತ ಲೋಕಸಭಾ ಚುನಾವಣೆ ಮಹಾಸಮರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸೈದ್ದಾಂ ತಿಕ ಸಂಘರ್ಷದ ಪ್ರತೀಕವಾಗಿದ್ದು ಈ ಹೋರಾಟ ಮುಂದುವರಿ ಯುವುದೆಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಮೈತ್ರಿಕೂಟವನ್ನು ಈ ಮಹತ್ವದ ವಿಜಯಕ್ಕಾಗಿ ಅಭಿನಂದಿಸುತ್ತೇನೆ. ಅಮೇಥಿಯಲ್ಲಿ ಜಯಶಾಲಿಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನೂ ಅಭಿನಂದಿಸುತ್ತೇನೆ. ಈ ಜನಾದೇಶವನ್ನು ನಾನು ಗೌರವಿಸುತ್ತೇನೆ. ಇದು ಪ್ರಜಾಪ್ರಭುತ್ವದ ಸತ್ಸಂಪ್ರದಾಯ” ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೈದರೂ ನಿಂದಿಸಿದರೂ ನಾನು ಸಕಲರನ್ನೂ ಪ್ರೀತಿಸುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರು ಈ ಫಲಿತಾಂಶದಿಂದ ಹತಾಶರಾಗಬೇಕಿಲ್ಲ. ರಾಜಕೀಯ ಸಂಗ್ರಾಮದಲ್ಲಿ ಸೋಲು ಗೆಲುವುಗಳನ್ನು ಧೈರ್ಯವಾಗಿ ಸ್ವೀಕರಿಸಿ ಮುನ್ನಡೆಯಬೇಕಾಗುತ್ತದೆ’ ಎಂದು ಅವರು ಭಾವುಕರಾಗಿ ನುಡಿದರು.

Leave a Reply