ಕೇರಳದ ಪ್ರಸಿದ್ಧ ಸಂಗೀತ ನಿರ್ದೇಶಕ, ವಾಯೊಲಿನ್ ಮಾಂತ್ರಿಕ ಬಾಲಬಾಸ್ಕರ್(42) ರಾತ್ರಿ ಹೃದಯಾಘಾತದಿಂದ ನಿಧನರಾದರು, ಸಂಗೀತ ಪ್ರೇಮಿಗಳ ಮನಸೂರೆಗೊಂಡಿದ್ದ ಈ ಅಮೂಲ್ಯ ಪ್ರತಿಭೆಯ ಅಂತ್ಯ ಸಂಗೀತ ಲೋಕಕ್ಕೆ ಮಹಾನಷ್ಟವೆಂದರೆ ತಪ್ಪಗಲಾರದು. ತನ್ನ ಹದಿನೇಳನೇಯ ವಯಸ್ಸಿನಲ್ಲಿಯೇ ಮಾಂಗಲ್ಯ ಪಲ್ಲಕ್ ಎಂಬ ಮಲಯಾಳ ಸಿನಿಮಾದ ಹಾಡುಗಳಿಗೆ ಸಂಗೀತ ನಿರ್ದೇಶಿಸಿ ಮಲಯಾಳಮ್ ಚಿತ್ರರಂಗದಲ್ಲಿ ಅತೀ ಕಿರಿಯ ಪ್ರಾಯದ ಸಂಗೀತ ನಿರ್ದೇಶಕ ಗೌರವವನ್ನು ಗಳಿಸಿದ್ದರು. ಸಂಗೀತ ಜಗತ್ತಿಗೆ ಕಾಲಿಟ್ಟ ಮೊದಲ ವರ್ಷದಲ್ಲಿಯೇ ಖ್ಯಾತ ಗಾಯಕ ಯೇಸುದಾಸ್,ಪ. ಜಯಚಂದ್ರನ್, ಕೆ.ಎಸ್.ಚಿತ್ರ ಮುಂತಾದ ಗಾಯಕರ ಹಾಡುಗಳಿಗೆ ಬಾಲಬಾಸ್ಕರ್ ವಾಯೋಲಿನ್ ಶಬ್ದವನ್ನು ಪಸರಿಸಿದ್ದರು.

ಕಳೆದ ವಾರ ತ್ರಿಶೂರ್ ನಲ್ಲಿ ಕುಟುಂಬ ಸಹಿತ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಹಿಂತಿರುಗುವಾಗ ಅಪಘಾತ ಸಂಭವಿಸಿತ್ತು . ಮಗಳು ತೇಜಸ್ವಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಬಾಲಬಾಸ್ಕರ್ ದಂಪತಿಗಳು ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರು. ಎರಡು ಸಾವಿರ ಇಸವಿಯ ದಶಂಬರದಲ್ಲಿ ವಿವಾಹಿತರಾದ ಅವರಿಗೆ ಸುಮಾರು ಹದಿನಾರು ವರ್ಷಗಳ ಬಳಿಕ ಸಂತಾನ ಭಾಗ್ಯ ಲಭಿಸಿತ್ತು. ಮಗಳ ಸಾವಿನ ಸುದ್ದಿ ಅವರಿಗೆ ಹೇಗೆ ಹೇಳುವುದೆಂಬ ಆತಂಕದಲ್ಲಿ ಅವರ ಕುಟುಂಬಸ್ಥರು ಇರುವಾಗಲೇ ಅವರು ಇಹಲೋಕ ತ್ಯಜಿಸಿದರು. ಪತ್ನಿ ಈಗಲೂ ಗಂಭೀರ ಸ್ಥಿತಿಯಲ್ಲಿದ್ದಾರೆ.

Leave a Reply