ಇದು ನಮ್ಮ ಊರು: ನಮ್ಮ ದೇಶದ ಬಹುದೊಡ್ಡ ಲಕ್ಷಣವೆಂದರೆ ಇಲ್ಲಿ ನೆಲೆಸುವ ಜನರ ನಡುವೆ ನೆಲೆಸುವ ವೈವಿಧ್ಯತೆ, ಧಾರ್ಮಿಕ ಸೌಹಾರ್ದತೆಯಾಗಿದೆ. ಪರಸ್ಪರ ಧರ್ಮಗಳನ್ನು ಗೌರವಿಸುವ ಪರಂಪರೆ ಈ ದೇಶದಲ್ಲಿ ಹಿಂದಿನಿಂದಲೂ ಇದೆ.

ಧಾರ್ಮಿಕ ಸಾಮರಸ್ಯದ ಅಂತಹ ಒಂದು ಉದಾಹರಣೆಯಲ್ಲಿ, ಮುಸ್ಲಿಂ ಕೌನ್ಸಿಲರ್ ರೊಬ್ಬರು ಹಿಂದೂ ದೇವಾಲಯವೊಂದರ ನಿರ್ಮಾಣಕ್ಕಾಗಿ 5.34 ಲಕ್ಷ ರೂ. ಕೊಡುಗೆ ನೀಡಿದ್ದಾರೆ.

ಸ್ಥಳೀಯ ಚುನಾವಣೆಗೆ ಮತಗಳನ್ನು ಕೋರಿ ನಜೀಮುದ್ದೀನ್ ರವರು ಮನಮಕೆಲುಡಿಯ ಮುತ್ತು ಮರಿಯಮ್ಮನ್ ದೇವಸ್ಥಾನದ ಅರ್ಚಕರಾದ ಚಿದಂಬರಂನ್ನು ಭೇಟಿಯಾದಾಗ ಅವರು ಮಂದಿರದ ಕೆಲಸ ಕಾರ್ಯದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಕೆಲಸವು ದಶಕಗಳಿಂದ ಹಾಗೆಯೇ ಬಾಕಿವುಳಿದಿತ್ತು. ಚುನಾವಣೆಯಲ್ಲಿ ಗೆದ್ದ ಕೂಡಲೇ ನಜೀಮುದ್ದೀನ್ ಕೆಲಸ ಮಾಡುವ ಭರವಸೆ ನೀಡಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಲಾಕ್ ಡೌನ್ ಸಮಯದಲ್ಲಿ ನಾಜಿಮುದ್ದೀನ್ ದುಬೈನಲ್ಲಿದ್ದರು. ಅದರ ನಂತರ ಮೊದಲನೇಯದಾಗಿ ದೇವಸ್ಥಾನಕ್ಕೆ 5.34 ಲಕ್ಷ ರೂ. ದಾನ ಮಾಡಿದರು.

“ನಜೀಮುದ್ದೀನ್ ರವರ ಕಚೇರಿ ತೆರೆದ ಕೂಡಲೇ ಅವರು ಮಂದಿರದ ರಸ್ತೆ ಕಾಮಗಾರಿ ಪ್ರಾರಂಭಿಸಿದರು. ದೇವರು ಒಬ್ಬನೇ ಎಂಬುದು ಇದರಿಂದ ಸಾಬೀತಾಗುತ್ತದೆ” ಎಂದು ಅರ್ಚಕರು ಹೇಳಿದರು.

Leave a Reply