ಎರಡು ದಿನದ ನವಜಾತ ಶಿಶುವಿಗೆ ರಕ್ತದ ತುರ್ತು ಅಗತ್ಯ ಇತ್ತು. ಮಗುವಿನ ರಕ್ತದ ಗುಂಪು “o negetive” ಇದು ಅಪರೂಪದ ರಕ್ತ ಗುಂಪಾಗಿದೆ. ಮಗುವಿನ ಕುಟುಂಬ ರಕ್ತ ಸಿಗದೇ ಕೊನೆಗೆ ಸಾಮಾಜಿಕ ಮಾಧ್ಯಮದಲ್ಲಿ ರಕ್ತ ಬೇಕು ಎಂದು ಮನವಿ ಮಾಡಿತ್ತು. ಅದೇ ಸಂದರ್ಭದಲ್ಲಿ ಉಪವಾಸ ವೃತ ಆಚರಿಸುತ್ತಿದ್ದ ಮುಸ್ಲಿಂ ಯುವಕ ಅಷ್ಫಾಕ್ ತನ್ನ ಉಪವಾಸ ಮುರಿದು ಆ ಮಗುವಿಗೆ ರಕ್ತದಾನ ಮಾಡುವ ಮೂಲಕ ಧರ್ಮ ಮಾನವೀಯತೆಯ ನಿಜವಾದ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.
ಆರತಿ ಕುಮಾರಿ ಎಂಬ ಮಹಿಳೆ ಬಿಹಾರದ ದರ್ಬಂಗ ಮೆಡಿಕಲ್ ಕಾಲೇಜಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹುಟ್ಟಿದ ಕೂಡಲೇ, ನವಜಾತ ಮಗುವಿನ ಸ್ಥಿತಿಯು ಹದಗೆಟ್ಟಿತು. ಮಗುವಿನ ತಂದೆ ರಮೇಶ್ ಕುಮಾರ್ ಸಿಂಗ್ ಎಸ್ಎಸ್ಪಿ ಆಗಿದ್ದು, ಮನೆಯಲ್ಲಿರಲಿಲ್ಲ. ಅವರ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ರಕ್ತದಾನದ ಮನವಿ ಮಾಡಿತು.

ಅಶ್ಫಾಕ್ ರಕ್ತದಾನ ಮಾಡಲು ಆಸ್ಪತ್ರೆಗೆ ಬಂದಾಗ ವೈದ್ಯರು ಅವರ ರಕ್ತವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಯಾಕೆಂದರೆ ಅವರು ಉಪವಾಸದಲ್ಲಿದ್ದರು. ಅಶ್ಫಾಕ್ ನವಜಾತ ಜೀವವನ್ನು ರಕ್ಷಿಸಲು ತನ್ನ ರಕ್ತವನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರೂ ಉಪವಾಸ ಮುರಿಯದೆ ರಕ್ತ ತೆಗೆಯಲಾಗದು ಎಂದು ವೈದ್ಯರು ಹೇಳಿದರು. ಕೊನೆಗೆ ಅಶ್ಫಾಕ್ ನವಜಾತ ಜೀವನವನ್ನು ಉಳಿಸಲು ತನ್ನ ಉಪವಾಸವನ್ನು ಮುರಿಯಲು ನಿರ್ಧರಿಸಿದರು. ‘ರೋಜಾ’ವನ್ನು ಮತ್ತೆ ಆಚರಿಸಬಹುದು, ಆದರೆ ಮಗುವಿನ ಜೀವ ಮತ್ತೆ ಉಳಿಸಲು ಸಾಧ್ಯವಿಲ್ಲ ಎಂದು ರೋಜಾ ಮುರಿದು ರಕ್ತದಾನ ಮಾಡಿದರು. ನಾವು ಹಿಂದೂ ಅಥವಾ ಮುಸ್ಲಿಂ ಎಂಬ ಬೇಧಭಾವ ಮಾಡಲ್ಲ. ಅಂತಹವುಗಳಲ್ಲಿ ನಮಗೆ ನಂಬಿಕೆ ಇಲ್ಲ. ಇದೀಗ ಅಶ್ಫಾಕ್ ನಮ್ಮ ಪಾಲಿಗೆ ದೇವರು ಎಂದು ಆ ಮಗುವಿನ ಅಜ್ಜಿ ಹೇಳಿದರು.

 

Leave a Reply