Image : ANI

ಜಿಲ್ಲಾಧಿಕಾರಿಯೊಬ್ಬರು ಅಪೌಷ್ಟಿಕತೆಯಿಂದ  ಬಳಲುತ್ತಿದ್ದ ಮಕ್ಕಳಿಗಾಗಿ ತನ್ನ ಕಚೇರಿಯ ಎಸಿಯನ್ನು ಕೊಟ್ಟು ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.
ಮಧ್ಯ ಪ್ರದೇಶದ ಅಮರಿಯಾದ ಜಿಲ್ಲಾಧಿಕಾರಿ ಸ್ವರೋಚಿತ್ ಸೋಮವಂಶಿ ಯವರು ತನ್ನ ಕಚೇರಿಯ ಎಸಿಯನ್ನು ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಬಿಟ್ಟು ಕೊಟ್ಟಿದ್ದಾರೆ. ಮಾತ್ರವಲ್ಲ ಸ್ವತಃ ಎಸಿ ರಹಿತವಾಗಿ ಫ್ಯಾನಿನಡಿಯಲ್ಲಿ ಕೂತು ಕೆಲಸ ಮಾಡುತ್ತಿದ್ದಾರೆ.
ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದ ಮಕ್ಕಳ ಅರೋಗ್ಯ ಇನ್ನಷ್ಟು ಕೆಡುತ್ತಿದೆ. ಆದ್ದರಿಂದ ಕೂಡಲೇ ಆ ಕೇಂದ್ರಕ್ಕೆ ಅಳವಡಿಸಲು ಕೂಡಲೇ ಆದೇಶ ನೀಡಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಕಚೇರಿ ಮತ್ತು ಹಾಲ್ ನಲ್ಲಿದ್ದ ಎಲ್ಲಾ ಏಸಿಗಳನ್ನು ಅವರು ಕೂಡಲೇ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ನೀಡಿ ಮಾನವೀಯತೆ ಮೆರೆದರು.

Leave a Reply