ಸಾಲಪಾವತಿಸಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬರ ಎರಡು ವರ್ಷದ ಮಗವನ್ನು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ಎರಡು ಕಣ್ಣುಗಳನ್ನು ಕಿತ್ತ ಭೀಕರ ಘಟನೆಯನ್ನು ರಾಜಕೀಯ ನಾಯಕರು, ಬಾಲಿವುಡ್ ನಟ ನಟಿಯರು ಹಾಗೂ ಕ್ರೀಡಾ ದಿಗ್ಗಜರು ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಲಿವುಡ್ ಮಂದಿ ಘಟನೆ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಆಕ್ರೋಶ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ, ಅಲಿ ಗಢದಲ್ಲಿ ನಡೆದಿರುವ ಭೀಕರ ಹತ್ಯೆ ಮುಗ್ಧ ಮಗವಿನ ಮೇಲೆ ನಡೆದ ಮತ್ತೊಂದು ಅಮಾನವೀಯ, ಪರಮ ನೀಚ ಅಪರಾಧ ಕೃತ್ಯವಾಗದೆ. ಮಗುವಿನ ಪೋಷಕರ ನೋವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗೇನಾಗಿದೆ? ಎಂದು ಟ್ವಿಟರ್ ನಲ್ಲಿ ಆಕ್ರೋಶ ಪೂರಿತವಾಗಿ ಪ್ರಶ್ನಿಸಿದ್ದಾರೆ.
The brutal murder in Aligarh is yet another inhuman, unspeakable crime against an innocent child. I cannot even begin to imagine the pain her parents must feel. What has become of us?
— Priyanka Gandhi Vadra (@priyankagandhi) June 7, 2019