“ನಾಥೂರಾಮ್ ಒಬ್ಬ ದೇಶಭಕ್ತ” ಎಂದು ಹೇಳಿದ್ದ ಬಿಜೆಪಿ ಅಭ್ಯರ್ಥಿ ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಕ್ಷಮೆ ಕೇಳಿದ್ದಾರೆ.
ನಾಥೂರಾಮ್ ಗೋಡ್ಸೆ ಕುರಿತು ನಾನು ಆಡಿದ್ದ ಮಾತುಗಳನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ನನ್ನ ಹೇಳಿಕೆಗಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಸಾಧ್ವಿ ಹೇಳಿದ್ದಾರೆ ಎನ್ನಲಾಗಿದೆ.
ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಹೇಳಿದ್ದ ಮಾತಿಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಬಿಜೆಪಿ ಸಹ ಸುದ್ದಿಗೋಷ್ಠಿ ನಡೆಸಿ ಪ್ರಗ್ಯಾ ಮಾತುಗಳನ್ನು ಖಂಡಿಸಿ, ಪ್ರಗ್ಯಾ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿತ್ತು.

ಇನ್ನೊಂದೆಡೆ ನಾಥೂರಾಮ್ ಹಿಂದೂ ಉಗ್ರ ಎಂದಿದ್ದ ನಟ ಕಮಲ್ ಹಾಸನ್ “ನಾನು ಯಾರ ಪ್ರಕ್ರಿಯೆಯಿಂದ ಹೆದರುವುದಿಲ್ಲ ಎಲ್ಲ ಧರ್ಮದಲ್ಲೂ ಭಯೋತ್ಪಾದಕರಿದ್ದಾರೆ. ಎಲ್ಲ ಧರ್ಮದಲ್ಲೂ ಭಯೋತ್ಪಾದಕರು ವಿಫುಲವಾಗಿದ್ದಾರೆ. ಯಾರು ತಮ್ಮ‌ ಧರ್ಮ ಸ್ವಚ್ಚವಾಗಿದೆಯೆಂದು ಹೇಳಿಕೊಳ್ಳುವಂತಿಲ್ಲವೆಂದು ಕಮಲ ಹಾಸನ್ ಹೇಳಿದ್ದಾರೆ. ಎನ್.ಡಿ.ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ನನ್ನ ಮೇಲೆ ಚಪ್ಪಲಿ, ಕಲ್ಲು ಎಸೆಯುದರಿಂದ ನಾನು ಹೆದರುವುದಿಲ್ಲ ಮತ್ತು ಹೇಳಿಕೆಯಿಂದ ಹಿಂಜರಿಯುದಿಲ್ಲವೆಂದು ಕಮಲ ಹಾಸನ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

Leave a Reply