ನನಗೆ ಒಂದು ಮಗು ಇದೆ. ನನ್ನ ಪತ್ನಿಗೆ 27 ವರ್ಷ ನನ್ನ ಸಮಸ್ಯೆ ಏನೆಂದರೆ ನನಗೆ ಒಂದು ವರ್ಷದಿಂದ ಜನನಾಂಗದ ನಿಮಿರು ಸಮಸ್ಯೆಯಿದೆ. ಕೆಲವು ಎಷ್ಟು ಬಾರಿ ಪ್ರಯತ್ನ ಪಟ್ಟರೂ ಸರಿಯಾಗುತ್ತಿಲ್ಲ.

ಆಗ ನನ್ನ ಮೇಲೆಯೇ ನನಗೆ ಮರುಕ ಉಂಟಾಗಿದೆ. ನನ್ನ ಪತ್ನಿಗೆ ನಿರಾಸೆಯಾಗುತ್ತಿದೆ. ಮದುವೆಗೆ ಮುಂಚೆ ವೇಶ್ಯಾಲಯಕ್ಕೆ ಸ್ನೇಹಿತರೊಂದಿಗೆ ಹೋಗಿದ್ದೆ, ಅದರಿಂದ ಸಮಸ್ಯೆ ಆಗಿರಬಹುದೇ. ಕೆಲವು ಸ್ನೇಹಿತರು ಮಾತ್ರೆಗಳನ್ನು ಸೇವಿಸಿದರೆ ಸರಿಯಾಗುತ್ತದೆ ಎಂದು ಹೇಳಿದ್ದಾರೆ. ಈ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾದರೆ ನನ್ನ ಅವಸ್ಥೆ ನೆನೆದು ಭಯವಾಗುತ್ತಿದೆ. ನಾನೇನು ಮಾಡಲಿ? ನಾನು ಹಿಂದೆ ವಿಪರೀತ ಗುಟ್ಕಾ ತಿನ್ನುತ್ತಿದ್ದೆ. ಒಂದು ಬಾರಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದೇನೆ. ಆದರೆ ಈಗ ಅದನ್ನು ಸಂಪೂರ್ಣ ನಿಲ್ಲಿಸಿದ್ದೇನೆ. ನನಗೆ ರಾತ್ರಿಯಲ್ಲಾ ನಿದ್ದೆ ಬೀಳುವುದಿಲ್ಲ. ಈ ಕಾರಣಕ್ಕೆ ಮದ್ಯ ಸೇವಿಸುವ ಚಟಕ್ಕೆ ಬಿದ್ದಿದ್ದೇನೆ. ನನಗೆ ಸರಿಯಾದ ಮಾರ್ಗದರ್ಶನ ಮಾಡಿ. 

ಸಲಹೆ: ನಿಮ್ಮ ಸಮಸ್ಯೆ ಅಷ್ಟೊಂದು ದೊಡ್ಡ ಸಮಸ್ಯೆಯಲ್ಲ. ಇಂತಹ ಸಮಸ್ಯೆ ಕೆಲವೊಂದು ಕಾರಣಗಳಿಂದ ಬರುತ್ತದೆ. ಅದಕ್ಕೆ ಸ್ನೇಹಿತರು ಹೇಳಿದಂತೆ ಔಷಧಿ ಸೇವಿಸಿ ಇನ್ನೊಂದು ಸಮಸ್ಯೆ ಸೃಷ್ಟಿಸುವುದು ಬೇಡ.

ಹಾಗೆಯೆ ಗುಟ್ಕಾ ಸೇವಿಸುವುದನ್ನು ನಿಲ್ಲಿಸಿದ್ದೀರಿ ಎಂದಿದ್ದೀರಿ. ಅದು ತುಂಬಾ ಉತ್ತಮ ಬೆಳವಣಿಗೆ. ಆದ್ರೆ ಅದಕ್ಕಿಂತಲೂ ಮದ್ಯ ಎಂಬ ಮಹಾ ಮಾರಿಗೆ ನೀವು ಬಲಿಯಾಗಿ ನಿಮ್ಮ ಲಿವರ್ ಮತ್ತು ಆರೋಗ್ಯ ಮತ್ತು ಕುಟುಂಬದ ಸಂತೃಪ್ತಿಯನ್ನು ಕೆಡಿಸುತ್ತಿದ್ದೀರಿ. ನಿಮಗೊಬ್ಬ ಮಗ ಇದ್ದಾನೆ, ಒಬ್ಬಳು ಹೆಂಡತಿ ಇದ್ದಾಳೆ ಎಂದು ನೀವು ಮರೆಯಬಾರದು. ಅವರಿಗಾಗಿ ಮತ್ತು ಅವರ ಭವಿಷ್ಯಕ್ಕಾಗಿ ನೀವು ಬದುಕಬೇಕು. ನಿಮಗೆ ಕೆಲವೊಂದು ಸಲಹೆ ನಮ್ಮದು.

1. ನೀವು ಆದಷ್ಟು ಬೇಗ ತಜ್ಞ ವೈದ್ಯರನ್ನು ಸಂಪರ್ಕಿಸಿ ತಮ್ಮ ಎಲ್ಲಾ ಸಮಸ್ಯೆಗಳನ್ನು ಮುಚ್ಚು ಮರೆಯಿಲ್ಲದೆ ಹೇಳಿ ಸಲಹೆ ಪಡೆಯಿರಿ. ಅವರು ಹೇಳಿದ ಪ್ರಕಾರ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸಿ.

2.ಕೆಟ್ಟ ದುರಭ್ಯಾಸ ಹೊಂದಿದ ಸ್ನೇಹಿತರಿಂದ ದೂರ ಇದ್ದು, ನಿಮ್ಮ ಮಕ್ಕಳು ಮತ್ತು ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಿರಿ.
ಮದ್ಯ ವರ್ಜಿಸಿ ಆರೋಗ್ಯದ ಕಡೆ ಗಮನ ಕೊಡಿರಿ.

3. ಅಲ್ಲ ಸಲ್ಲದ ಆಲೋಚನೆಗಳಿಂದ ಖಿನ್ನತೆಗೊಳಗಾಗಿ ಬಳಿಕ ಜೀವನದಲ್ಲಿ ಸಂಪೂರ್ಣ ವಿಫಲ ಆಗುವುದಕ್ಕಿಂತ ಮುಂಚೆ ಅದರಿಂದ ಹೊರ ಬನ್ನಿ.

4. ವೇಶ್ಯಾಲಯಕ್ಕೆ ಹೋದ ತಪ್ಪಿಗಾಗಿ ಪಶ್ಚತ್ತಾಪ ಪಟ್ಟು, ಪರೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳಿ.

Leave a Reply